fbpx

ನೋಡೋಕೆ ಬಣ್ಣಬಣ್ಣದ ಎಲೆಗಳಂತೆ ಕಂಡರೂ ಇವಕ್ಕೆ ಜೀವ ಇದೆ, ವೈರಲ್ ವಿಡಿಯೋ ನೋಡಿ

ಭೂಮಿ ಅದೆಷ್ಟೋ ವಿಸ್ಮಯಗಳ ತಾಣವಾಗಿದೆ. ನಾವು ಜಗತ್ತಿನಲ್ಲಿ ಎಂತೆಂತಹ ವಿಚಿತ್ರ ಪ್ರಾಣಿಗಳನ್ನು ನೋಡಿರುತ್ತೇವೆ. ಆದ್ರೆ ಕೆಲವೊಮ್ಮೆ ನಾವು ನೋಡಿದ ಪ್ರಾಣಿಗಳನ್ನು ನಮ್ಮ ಕಣ್ಣುಗಳೇ ನಂಬುವುದಿಲ್ಲ, ಅಷ್ಟೊಂದು ವಿಚಿತ್ರವಾಗಿರುತ್ತವೆ.

ಈ ಕೀಟವೂ ಅದೇ ಜಾತಿಗೆ ಸೇರಿದ ಒಂದು ಜೀವಿಯಾಗಿದೆ. ನೋಡೋಕೆ ಥೇಟ್ ಬಣ್ಣಬಣ್ಣದ ಎಲೆಯಂತೆ ಕಂಡರೂ ಇವಕ್ಕೆ ಜೀವ ಇದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಬಲ್ಲದು.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಕೀಟಗಳನ್ನೇ ತಿಂದು ಬದುಕುವ ಪ್ರಾಣೆ, ಪಕ್ಷಿಗಳಿಂದ ರಕ್ಷಿಸಿಕೊಳ್ಳಲು ಇವುಗಳ ರಚನೆ ಸಹಕಾರಿಯಾಗಿದೆ. ಇವು ನೋಡಿದ ತಕ್ಷಣ ಎಲೆಯಂತೆಯೇ ಕಂಡುಬರುತ್ತವೆ, ಇವುಗಳ ರಚನೆಯೂ ಎಲೆಯನ್ನೇ ಹೋಲುತ್ತವೆ. ಹೆಚ್ಚಾಗಿ ಹಸಿರು, ಕಂದು ಬಣ್ಣದಲ್ಲಿ ಕಂಡು ಬರುವ ಈ ಕೀಟಗಳು ಹಸಿರೆಲೆ, ಒಣಗಿದ ಎಲೆಯಂತೆ ಕಾಣಿಸುತ್ತವೆ.

ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಮೂರು ಇದೇ ಜಾತಿಗೆ ಸೇರಿದ ಮೂರು ಬಣ್ಣಗಳ ಕೀಟಗಳ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ,

Watch Video

video

error: Content is protected !!