fbpx

ಎಕೆ47 ಗನ್ನನೆ ನುಂಗಿಬಿಡ್ತಾ ಈ ಹಾವು? ವೈರಲ್ ವಿಡಿಯೋ ನೋಡಿ

ಹಾವುಗಳು ಕಪ್ಪೆ, ಇಲಿಗಳನ್ನು ಹಿಡಿದು ನುಂಗೋದನ್ನ ನಾವು ನೋಡಿರುತ್ತೇವೆ. ದೈತ್ಯ ಹೆಬ್ಬಾವುಗಳು, ಅನಾಕೊಂಡಗಳು ಪ್ರಾಣಿಗಳನ್ನು ನುಂಗೋದರ ಬಗ್ಗೆಯೂ ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಹಾವು ಎಕೆ47 ಗನ್‌ಅನ್ನೇ ನುಂಗಿ ಬಿಟ್ಟಿದೆಯಂತೆ.

ಸದ್ಯ ಈ ಹಾವಿನ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಲು ಶುರುವಾಗಿದೆ. ಕಪ್ಪು ಬಣ್ಣದ ಹಾವೊಂದು ಯಾವುದೋ ವಸ್ತುವನ್ನು ನುಂಗಿರೋದನ್ನ ಪೋಟೋದಲ್ಲಿ ಕಾಣಬಹುದಾಗಿ, ಮೇಲ್ನೋಟಕ್ಕೆ ಇದು ಎಕೆ47 ಗನ್‌ನಂತೆ ಗೋಚರಿಸುತ್ತದೆ.

ಈ ಪೋಟೋ ಕಳೆದ ಆರು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟ್ವಿಟರ್ ಬಳಕೆದಾರ @paeh_judin ಎಂಬಾತ ಈ ಪೋಟೋವನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸಿದ್ದು, ಅಲ್ಲಿಂದಲೇ ವೈರಲ್ ಆಗಲು ಶುರುವಾಗಿದೆ.

ಅನೇಕ ಫಾಕ್ಟ್ ಚೆಕ್ ವೆಬ್‌ಸೈಟ್ ಗಳು ಈ ಪೋಟೋ ಅಸಲಿಯೋ ಎಂಬುದರ ಬಗ್ಗೆ ಸತ್ಯಶೋಧನೆಗೆ ಇಳಿದಿದ್ದು, ಯಾರಿಗೂ ಇದುವರೆಗೆ ಇದರ ಮೂಲ ಸಿಕ್ಕಿಲ್ಲ. ಪೋಟೋವನ್ನು ಸರಿಯಾಗಿ ನೋಡಿದ್ರೆ ಇದೊಂದು ಎಡಿಟ್ ಮಾಡಲಾದ ಪೋಟೋದಂತೆ ಕಾಣಿಸುತ್ತದೆ. ಅಥವಾ ಹಾವು ಗನ್‌ ನುಂಗಿರುವಂತೆ ಗೊಂಬೆಯನ್ನೂ ತಯಾರಿಸಿರಬಹುದು.

ಹಾವುಗಳು ಈರೀತಿ ವಸ್ತುಗಳನ್ನು ನುಂಗಲು ಸಾಧ್ಯವಿಲ್ಲ ಎಂದು ತಜ್ಞರು ಕೂಡ ಹೇಳಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!