fbpx

ಅಳಿಲನ್ನು ಅಟ್ಟಿಸಿಕೊಂಡು ಹೋದ ನಾಯಿ ಸಿಕ್ಕಾಕೊಂಡಿದ್ದೆಲ್ಲಿ ನೋಡಿ, ವೈರಲ್ ವಿಡಿಯೋ

ನಾಯಿಯೊಂದು ಅಳಿಲನ್ನು ಅಟ್ಟಿಸಿಕೊಂಡು ಹೋಗುವ ಭರದಲ್ಲಿ ಮರದ ಪೊಟರೆಯೊಳಗೆ ಸಿಕ್ಕಿಹಾಕಿಕೊಂಡ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಳಿಲನ್ನು ಅಟ್ಟಿಸಿಕೊಂಡು ಕಾಡಿನ ಕಡೆ ಹೋದ ತನ್ನ ನಾಯಿ ಮರಳಿ ಬರದ್ದನ್ನು ಗಮನಿಸಿದ ಮಾಲಕ ಅದನ್ನು ಹುಡುಕಿಕೊಂಡು ಕಾಡಿನ ಕಡೆ ಹೆಜ್ಜೆ ಹಾಕಿದ್ದಾನೆ.

ಎಷ್ಟೇ ಹುಡುಕಿದ್ರೂ ನಾಯಿಯ ಪತ್ತೆಯಾಗುವುದಿಲ್ಲ, ಇನ್ನೇನು ವಾಪಾಸ್ ಬರುವ ಹೊತ್ತಿಗೆ ನಾಯಿ ಬೊಗಳುವ ಸದ್ದು ಕೇಳಿದೆ. ತಕ್ಷಣ ಸದ್ದು ಬಂದ ಕಡೆ ತೆರಳಿದ ಮಾಲಕನಿಗೆ ನಾಯಿಯನ್ನು ಕಂಡು ಶಾಕ್ ಕಾದಿತ್ತು.

ನಾಯಿ ಅಳಿಲನ್ನು ಹಿಂಬಾಲಿಸಿಕೊಂಡು ಓಡಿದ್ದು, ಅಳಿಲು ಮರವೊಂದರ ಕಾಂಡದ ಬಳಿ ಇದ್ದ ರಂಧ್ರದ ಮೂಲಕ ಒಳಹೊಕ್ಕಿದೆ. ನಾಯಿ ಕೂಡ ಅದೇ ರಂದ್ರದ ಮೂಲಕ ಒಳಹೋಗಿದ್ದು, ಮಧ್ಯದಲ್ಲಿಯೇ ಸಿಕ್ಕಿಹಾಕಿಕೊಂಡಿದೆ.

ಅಳಿಲು ಇನ್ನೊಂದು ರಂಧ್ರದ ಮೂಲಕ ತಪ್ಪಿಸಿಕೊಂಡಿದ್ದು, ನಾಯಿ ತಲೆ ಅದೇ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡಿದೆ. ಹೊರಬರಲಾಗದೆ ನಾಯಿ ನರಕವೇದನೆ ಅನುಭವಿಸಿದ್ದು, ನಾಯಿಯನ್ನು ಕಂಡ ಮಾಲಕ ತಕ್ಷಣ ಮರ ತುಂಡರಿಸುವ ಯಂತ್ರದ ಮೂಲಕ ಮರವನ್ನು ಕತ್ತರಿಸಿ ನಾಯಿಯನ್ನು ರಕ್ಷಿಸಿದ್ದಾನೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!