fbpx

Please assign a menu to the primary menu location under menu

ಸಿಂಹದ ಮರಿಯನ್ನು ಕಿಡ್ನಾಪ್ ಮಾಡಿ ಮರದ ಮೇಲೆ ಹೊತ್ತೊಯ್ದ ಹೆಗ್ಗೋತಿ, ಮುಂದೇನಾಯಿತು ನೋಡಿ (ವೈರಲ್ ವಿಡಿಯೋ)

ಗಂಡು ಹೆಗ್ಗೋತಿಯೊಂದು ಸಿಂಹಗಳ ಹಿಂಡಿನಿಂದ ಸಿಂಹದ ಮರಿಯನ್ನು ಎತ್ತಾಕಿಕೊಂಡು ಓಡಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಕ್ಷಿಣ ಆಫ್ರಿಕಾದ ಕೃಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ಹೆಗ್ಗೋತಿ ಸಿಂಹದ ಮರಿಯನ್ನು ಹಿಡಿದುಕೊಂಡು ಮರದಿಂದ ಮರಕ್ಕೆ ಹಾರೋದನ್ನ ಕಾಣಬಹುದಾಗಿದೆ.

ಗಂಡು ಹೆಗ್ಗೋತಿಗಳು ತಮ್ಮ ಮಕ್ಕಳ ಮೇಲೆ ಅತಿಯಾದ ಪ್ರೀತಿ ತೋರಿಸುತ್ತೆ, ಆರೈಕೆ ಮಾಡುತ್ತೆ. ಆದರೆ ಈ ಹೆಗ್ಗೋತಿ ಮಾತ್ರ ತನ್ನದೇ ಮರಿಯಂತೆ ಸಿಂಹದ ಮರಿಯ ಆರೈಕೆಯಲ್ಲಿ ತೊಡಗಿದೆ.

ಕಳೆದ ಫೆಬ್ರವರಿಯಲ್ಲಿ ಈ ಘಟನೆ ನಡೆದಿದ್ದು, ಉದ್ಯಾನವನಕ್ಕೆ ಆಗಮಿಸುವ ಪ್ರವಾಸಿಗರನ್ನು ಸಫಾರಿಗೆ ಕೊಂಡೊಯ್ಯುವ ವ್ಯಕ್ತಿ ಈ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ತಾನು 20 ವರ್ಷದಿಂದ ಇದೇ ಉದ್ಯಾನವನದಲ್ಲಿ ಕೆಲಸ ಮಾಡುತ್ತಿದ್ದು, ನನ್ನ ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಇಂತಹ ಘಟನೆ ನೋಡಿಲ್ಲ ಎಂದಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ

Watch Video

video
error: Content is protected !!