fbpx

ಭಾರತದ ಸ್ವಾತಂತ್ರ್ಯ ದಿನದಂದು ಪಾಪಿ ಪಾಕಿಸ್ತಾನದ ಧ್ವಜ ಹಾರಾಟದ ವಿಡಿಯೋ ಶೇರ್ ಮಾಡಿದ ಮು’ಸ್ಲಿಂ ಯುವಕ, ಮುಂದೇನಾಯಿತು ನೋಡಿ!

ಭಾರತದ ಸ್ವಾತಂತ್ರ್ಯೋತ್ಸವದ ದಿನ ಹಾವೇರಿ ಮೂಲದ ಯುವಕನೊಬ್ಬ ಪಾಪಿ ಪಾಕಿಸ್ತಾನದ ಧ್ವಜದ ವಿಡಿಯೋ ಶೇರ್ ಮಾಡಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಧ್ವಜಾರೋಹಣ ಮಾಡಿರುವ ವಿಡಿಯೋವನ್ನು ಯುವಕ ತನ್ನ ಖಾತೆಯಲ್ಲಿ ಶೇರ್ ಮಾಡಿದ್ದಾನೆ.

ಸವಣೂರು ತಾಲೂಕಿನ ಕಾರಡಗಿ ಗ್ರಾಮದ ಯುವಕನೇ ಪಾಕಿಸ್ತಾನದ ಧ್ವಜವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರೋದು. ಗ್ರಾಮದ ಮಲ್ಲಿಕರೆಹಾನ್ ಹುಲಗೂರ ಎಂಬಾತನೇ ವಿಡಿಯೋ ಶೇರ್ ಮಾಡಿದ ಯುವಕ.

ಪಾಕಿಸ್ತಾನದಲ್ಲಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದ್ದು, ಶುಕ್ರವಾರದಂದು ಪಾಕಿಸ್ತಾನದ ಯಾವುದೋ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ ವಿಡಿಯೋವನ್ನು ಭಾರತದ ಸ್ವಾತಂತ್ರ್ಯೋತ್ಸವದ ದಿನ ಶೇರ್ ಮಾಡುವ ಮೂಲಕ ದೇಶಪ್ರೇಮಿ ಭಾರತೀಯರ ಮನಸ್ಸಿಗೆ ನೋವನ್ನುಂಟು ಮಾಡಿದ್ದಾನೆ.

ಈ ಮೂಲಕ ಸಮುದಾಯಗಳ ಮಧ್ಯೆ ಶಾಂತಿ ಕದಡಲು ಯತ್ನಿಸಿದ್ದಾನೆ ಎಂದು ಆರೋಪಿಸಿ, ಆತನ ವಿರುದ್ಧ ಗ್ರಾಮದ ಗದಿಗೆಪ್ಪ ಕುರುವತ್ತಿ ಎಂಬುವರು ಸವಣೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೋಲೀಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ.

error: Content is protected !!