fbpx

Please assign a menu to the primary menu location under menu

ನೀರಿಗೆ ಬಿದ್ದ ಪರ್ಸ್ ಎತ್ತಿಕೊಳ್ಳಲು ಮೊಸಳೆಗಳೇ ತುಂಬಿರುವ ಹಳ್ಳಕ್ಕೆ ಇಳಿದ ಮಹಿಳೆ, ಶಾಕಿಂಗ್ ವಿಡಿಯೋ ವೈರಲ್

ಮೊಸಳೆಗಳೇ ತುಂಬಿರುವ ನೀರಿನ ಹಳ್ಳಕ್ಕೆ ಬಿದ್ದ ತನ್ನ ಪರ್ಸ್ ಎತ್ತಿಕೊಳ್ಳಲು ಮಹಿಳೆಯೊಬ್ಬರು ತನ್ನ ಜೀವವನ್ನೇ ಪಣಕ್ಕಿಟ್ಟ ಶಾಕಿಂಗ್ ವಿಡಿಯೋವೊಂದು ವೈರಲ್ ಆಗಿದೆ. ಮೃಗಾಲಯಕ್ಕೆ ಮಗನ ಜೊತೆ ಭೇಟಿ ನೀಡಿದ್ದ ಮಹಿಳೆ ಮೊಸಳೆಗಳ ವಿಡಿಯೋ ಚಿತ್ರೀಕರಿಸುವಾಗ ಕೈಜಾರಿ ಪರ್ಸ್ ಮೊಸಳೆಗಳಿರುವ ನೀರಿನ ಗುಂಡಿಗೆ ಬಿದ್ದಿದೆ.

ತಕ್ಷಣ ಅಲ್ಲಿ ಹಾಕಲಾಗಿರುವ ತಡೆಗೋಡೆ ಹಾರಿ ಮಹಿಳೆ ಅಲ್ಲೇ ಇದ್ದ ಕೋಲು ಎತ್ತಿಕೊಂಡು ಮೊಸಳೆಗಳನ್ನು ಪರ್ಸ್ ಇರೋ ಜಾಗದಿಂದ ದೂರ ಓಡಿಸಲು ನೋಡಿದ್ದಾಳೆ. ನಂತರ ಅಲ್ಲೇ ಇದ್ದ ಕಲ್ಲು ಎತ್ತಿ ಎಸೆದು ಮೊಸಳೆಗಳ ಗಮನ ಬೇರೆಡೆ ಸೆಳೆಯಲು ಯತ್ನಿಸಿದ್ದು, ಕೊನೆಗೆ ಅಲ್ಲೇ ಇದ್ದ ಮರದ ಹಲಗೆಯ ಮೇಲೆ‌ ನಿಂತು ನೀರಿನಲ್ಲಿ ಬಿದ್ದಿದ್ದ ತನ್ನ ಪರ್ಸ್ ಎತ್ತಿಕೊಂಡು ಅಲ್ಲಿಂದ ಓಡಿಬಂದು ಜೀವ ಉಳಿಸಿಕೊಂಡಿದ್ದಾಳೆ.

ಅಲ್ಲೇ ಇದ್ದ ಆಕೆಯ ಮಗ ‘ಬೇಡ ಅಮ್ಮ, ಮೊಸಳೆಗಳು ನಿಮ್ಮ ಮೇಲೆ ದಾಳಿ ಮಾಡಿ ತಿನ್ನಬಹುದು’ ಎಂದು ಎಚ್ಚರಿಸೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಮಹಿಳೆಯ ಅದೃಷ್ಟ ಚೆನ್ನಾಗಿತ್ತು, ಮೊಸಳೆಗಳಿಗೂ ಹಸಿದಿರಲಿಲ್ಲ ಅನ್ನಿಸುತ್ತೆ ಮಹಿಳೇ ಜೀವಂತವಾಗಿ ಅಲ್ಲಿಂದ ಹೊರ ಬಂದಿದ್ದಾಳೆ.

ಅಮೇರಿಕಾದ ಮಿನ್ನೇಸೋಟದಲ್ಲಿರುವ ‘ಸಫಾರಿ ನೋರ್ತ್ ಮೃಗಾಲಯದಲ್ಲಿ ಈ ಘಟನೆ ನಡೆದಿದೆ. ಅಲ್ಲೇ ಇದ್ದ ಜನ ಈ ವಿಡಿಯೋವನ್ನು ಚಿತ್ರೀಕರಿಸಿದ್ದು, ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

video
error: Content is protected !!