fbpx

Please assign a menu to the primary menu location under menu

ನವೀನ್ ಯಾವ ರಾಜಕೀಯ ಪಕ್ಷದ ಕಾರ್ಯಕರ್ತ ಗೊತ್ತೇ? ಅವನೇ ಪೋಲೀಸರ ಮುಂದೆ ಬಾಯಿಬಿಟ್ಟಿದ್ದಾನೆ ನೋಡಿ

ನನ್ನದು ಕಾಂಗ್ರೆಸ್ ಪಕ್ಷ, ಹಿಂದು ಧರ್ಮ, ‘ಕಾಂಗ್ರೆಸ್‌ನಲ್ಲಿದ್ದ ಮಾತ್ರಕ್ಕೆ ಹಿಂದು ಧರ್ಮದ ಪರ ಮಾತನಾಡಬಾರದೇ’ ಎಂದು ಬಂಧಿತ ನವೀನ್ ಪೊಲೀಸರನ್ನೇ ಪ್ರಶ್ನಿಸಿದ್ದಾನೆ. ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ನವೀನ್ ಪೊಲೀಸ್ ವಿಚಾರಣೆ ವೇಳೆ ಹಲವು ವಿಚಾರಗಳನ್ನು ಬಾಯಿಬಿಟ್ಟಿದ್ದಾನೆ.

ನಾನು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಗಳನ್ನು ಪ್ರಕಟಿಸಿಲ್ಲ. ಹಿಂದು ಧರ್ಮಕ್ಕೆ ಧಕ್ಕೆ ತರುವ ಕೃತ್ಯಗಳನ್ನು ನಾನು ಹಿಂದಿನಿಂದಲೂ ಖಂಡಿಸುತ್ತಲೇ ಬಂದಿದ್ದೇನೆ. ಹಿಂದು ಧರ್ಮ ಹಾಗೂ ಆಚರಣೆ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕುವವರಿಗೆ ಕಾಮೆಂಟ್ಸ್ ಬಾಕ್ಸ್ ನಲ್ಲಿ ತಿರುಗೇಟು ನೀಡಿದ್ದೇನೆ ಎಂದು ಹೇಳಿದ್ದಾನೆ.

‘ಇದೇ ವಿಚಾರಕ್ಕೆ ಸಂಬಂಧಿಸಿ ನನ್ನ ವಿರುದ್ಧ ಕೆಲವರು ಪಿತೂರಿ ನಡೆಸಿದ್ದಾರೆ. ಕೆಲವರು ಜಾಲತಾಣದಲ್ಲಿ ಬೆದರಿಕೆ ಹಾಕುತ್ತಿದ್ದರು. ಜೀವ ತೆಗೆಯುದಾಗಿಯೂ ಹೆದರಿಸಿದ್ದಾರೆ’ ಎಂದು ನವೀನ್ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್ ಗಲಭೆ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ನವೀನ್‌ಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ, ನವೀನ್ ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದಾರೆ‌. ಆದರೆ ಇದೇ ಡಿ.ಕೆ.ಶಿ ಜೈಲಿನಿಂದ ಹೊರಬಂದಾಗ ನವೀನ್ ಡಿ.ಕೆ.ಶಿವಕುಮಾರ್ ಪರ ಪೋಸ್ಟ್ ಹಾಕಿದ್ದ.

ಇದೀಗ ನವೀನ್ ನಾನು ಕಟ್ಟಾ ಕಾಂಗ್ರೆಸ್ ಪಕ್ಷದ ಬೆಂಬಲಿಗ, ನನ್ನದು ಹಿಂದೂ ಧರ್ಮ ಎಂದು ಹೇಳಿರೋದರಿಂದ ಡಿಕೆಶಿಗೆ ಮುಖಭಂಗವಾಗಿದೆ.

Watch Video

error: Content is protected !!