fbpx

ಆರು ದಿನದ ಶಿಶುವನ್ನು ನೋಡಿಕೊಳ್ಳೋಕೆ ಕೆಲಸದಾಕೆಯನ್ನು ನೇಮಿಸಿದ್ರು, ಆದ್ರೆ ಸಿಸಿಟಿವಿ ದೃಶ್ಯ ನೋಡಿ ಬೆಚ್ಚಿಬಿದ್ರು (ವೈರಲ್ ವಿಡಿಯೋ)

ಮಗುವಿನ ಪೋಷಣೆ, ಆರೈಕೆ ಇಂದಿನ ಮಹಿಳೆಯರಿಗೆ ಹೊರೆ ಎನಿಸುವಂತಾಗಿದೆ. ಸಂಪಾದನೆಗೆ ಮೊದಲ ಆದ್ಯತೆ ನೀಡುತ್ತಾ ತಾಯ್ತನ ಎಂಬುದು ಬೇಡದ ಉಸಾಬರಿಯಂತಾಗಿದೆ. ಮಕ್ಕಳಾದವರೂ ಕೂಡ ಅಷ್ಟೇ, ಅದನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸುತ್ತಾರೆ.

ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಆರು ದಿನದ ಎಳೆಗೂಸನ್ನು ನೋಡಿಕೊಳ್ಳಲು ದಾದಿಯನ್ನು ನೇಮಿಸಿದ ದಂಪತಿ ಸಂಕಷ್ಟಕ್ಕೆ ಈಡಾಗಿದ್ದಾರೆ. ಚೀನಾದ ಹೆಬೈ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಕೆಲಸಕ್ಕೆ ನೇಮಿಸಿದ ಮಹಿಳೆ ಆರು ದಿನದ ಎಳೆಗೂಸಿನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾಳೆ.

ಮಗುವನ್ನು ನೋಡಿಕೊಳ್ಳಲು ಬಂದ 50 ವರ್ಷದ ಈ ಮಹಿಳೆಯ ಮೇಲೆ ಈ ಹಿಂದೆಯೂ ಮಗುವಿನ ಮೇಲೆ ಹಲ್ಲೆನಡೆಸಿದ್ದಕ್ಕೆ ಪ್ರಕರಣ ದಾಖಲಿಸಲಾಗಿತ್ತಂತೆ, ಇದನ್ನು ಅರಿಯದ ದಂಪತಿ ಅದೇ ಮಹಿಳೆಯನ್ನು ತಮ್ಮ ಮಗುವಿನ ಆರೈಕೆಗೆ ನೇಮಿಸಿದ್ದಾರೆ. ಆದರೆ ಆಕೆ ಆರೈಕೆ ಮಾಡುವ ಬದಲು ಆರು ದಿನದ ಮಗುವನ್ನು ಎತ್ತಿ ಎಸೆಯೋದು, ಅದರ ಮೇಲೆ ಹಲ್ಲೆ ನಡೆಸೋದು ಮಾಡಿದ್ದಾಳೆ.

ಈ ಎಲ್ಲಾ ಕೃತ್ಯಗಳು ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದ್ದು, ಮಗುವಿನ ತಂದೆ ಆಕೆಯ ಮೇಲೆ ವಿಡಿಯೋ ದಾಖಲೆ ಸಮೇತ ಕೇಸು ದಾಖಲಿಸಿದ್ದಾನೆ. ದಾದಿ ಮಗುವಿನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಇಲ್ಲಿದೆ ನೋಡಿ ವಿಡಿಯೋ‌.

Watch Video

error: Content is protected !!