fbpx

ಬೈಕ್ ಸವಾರನ ನಿರ್ಲಕ್ಷ್ಯಕ್ಕೆ ಕಾರಿನ ಚಕ್ರಕ್ಕೆ ಸಿಲುಕಿದ ಮಗು, ಮುಂದೇನಾಯಿತು ನೋಡಿ (ವೈರಲ್ ವಿಡಿಯೋ)

ಕೆಲವೊಮ್ಮೆ ಮನುಷ್ಯ ಎಷ್ಟೊಂದು ಕಟುಕನಾಗಿ ವರ್ತಿಸುತ್ತಾನೆ ಎಂದರೆ, ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ಮೇಲು ಎಂದು ಅನ್ನಿಸಲು ಶುರುವಾಗುತ್ತೆ. ಈ ವಿಡಿಯೋವನ್ನೆ ನೋಡಿ, ಪುಟ್ಟ ಮಗುವೊಂದು ರಸ್ತೆಯ ಮಧ್ಯದಲ್ಲಿದ್ದರೂ ಅಲ್ಲೇ ಸಂಚರಿಸಿದ ಬೈಕ್ ಸವಾರ ಮಗುವನ್ನು ರಕ್ಷಣೆ ಮಾಡೋದು ಬಿಟ್ಟು ನೋಡಿಯೂ ನೋಡದಂತೆ ಹೋಗಿದ್ದಾನೆ.

ಪುಟಾಣಿ ಮಗು ತೆವಳುತ್ತಾ ರಸ್ತೆಗೆ ಬಂದಿದ್ದು, ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರು ಇದನ್ನು ನೋಡಿಯೂ, ತಮಗೂ ಇದಕ್ಕೂ ಸಂಬಂಧವಿಲ್ಲ ಅಂತ ತೆರಳಿದ್ದಾರೆ. ಮಗುವಿನ ಪಕ್ಕದಲ್ಲೇ ಸಂಚರಿಸಿದ ಬೈಕ್ ಸವಾರ ಕೂಡ ಮಗುವನ್ನು ನೋಡಿ ಅದನ್ನು ರಕ್ಷಿಸುವ ಗೋಜಿಗೆ ಹೋಗಿಲ್ಲ.

ಅದೇ ರಸ್ತೆಯಲ್ಲಿ ಕಾರೊಂದು ಬಂದಿದ್ದು, ಕಾರ್ ಚಾಲಕ ರಸ್ತೆಯ ಮಧ್ಯೆ ಮಗು ಇರೋದನ್ನು ಗಮನಿಸದೆ ಅದರ ಮೇಲೆಯೇ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಮಗುವನ್ನು ದಾಟಿ ಮುಂದೆ ಹೋದ ಮೇಲೆ ತನ್ನ ಕಾರಿನ ಚಕ್ರಕ್ಕೆ ಏನೋ ಸಿಲುಕಿದ ಅನುಭವ ಆಯ್ತೋ ಏನೋ, ಕಾರನ್ನು ನಿಲ್ಲಿಸಿ ಹೊರಗಿಳಿದು ಬಂದಿದ್ದಾನೆ‌.

ನೋಡಿದ್ರೆ ಮಗು ಕಾರಿನ ಚಕ್ರಕ್ಕೆ ಸಿಲುಕಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಗುವಿನ ಆಯುಷ್ಯ ಗಟ್ಟಿ ಇತ್ತು, ಕಾರು ತನ್ನ ಮೇಲೆ ಹರಿದ್ರೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!