fbpx

Please assign a menu to the primary menu location under menu

ಆಸ್ತಿ ಕೇಳಿದ ಮಗನನ್ನು ಸುತ್ತಿಗೆಯಿಂದ ಬಡಿದು ಭೀಕರವಾಗಿ ಹ’ತ್ಯೆಗೈದ ತಂದೆ, ಸಿಸಿಟಿವಿಯಲ್ಲಿ ಸೆರೆಯಾಯಿತು ಭಯಾನಕ ದೃಶ್ಯ (ವಿಡಿಯೋ)

ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ತಂದೆಯೇ ಮಗನನ್ನು ಭೀ’ಕರವಾಗಿ ಹ’ತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಘಟನೆ ನಡೆದಿದ್ದು, ತಂದೆ ವೀರರಾಜು ಎಂಬಾತ ತನ್ನ 40 ವರ್ಷದ ಮಗ ಜಲರಾಜುವನ್ನು ಸುತ್ತಿಗೆಯಿಂದ ಬಡಿದು ಹತ್ಯೆ ಮಾಡಿದ್ದಾನೆ.

ಹತ್ಯೆಯಾದ ಜಲರಾಜು ನೌಕಾಪಡೆಯ ಉದ್ಯೋಗಿಯಾಗಿದ್ದು, ವಾರದ ಹಿಂದಷ್ಟೇ ರಜೆಯ ಮೇಲೆ ಊರಿಗೆ ಬಂದಿದ್ದರು. ತಂದೆಯಲ್ಲಿ ಆಸ್ತಿ ತನ್ನ ಹೆಸರಿಗೆ ಬರೆಯುವಂತೆ ಕೇಳಿಕೊಂಡಿದ್ದರು, ಇದೇ ಕಾರಣಕ್ಕೆ ಕೋಪಗೊಂಡ ತಂದೆ ಮಗನನ್ನೇ ಹತ್ಯೆಗೈದಿದ್ದಾನೆ.

ಹತ್ಯೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಟುಕ ತಂದೆಯ ಕೃತ್ಯಗಳು ಬೆಚ್ಚಿಬೀಳಿಸುವಂತಿದೆ. ಜಲರಾಜು ಕುಳಿತು ಕೆಲಸ ಮಾಡುತ್ತಿದ್ದಾಗ ಹಿಂದೆಯಿಂದ ಬಂದ ತಂದೆ ಏಕಾಏಕಿ ಸುತ್ತಿಗೆಯಿಂದ ತಲೆಗೆ ಬಡಿದಿದ್ದಾನೆ.

ಹೊಡೆತದ ರಭಸಕ್ಕೆ ಜಲರಾಜು ಪ್ರಜ್ಞಾಹೀನರಾಗಿ ಕೆಳಗೆ ಬಿದ್ದಿದ್ದು, ಅರೋಪಿ ಮತ್ತೆ ಮತ್ತೆ ಸುತ್ತಿಗೆಯಿಂದ ಪ್ರಹಾರ ನಡೆಸಿದ್ದಾನೆ. ಇದರಿಂದ ಜಲರಾಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರೋಪಿ ವೀರರಾಜು ಕೊಲೆ ಮಾಡಿದ ನಂತರ ಪೊಲೀಸರಿಗೆ ಶರಣಾಗಿದ್ದಾನೆ.

ಪೋಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆಸ್ತಿ ಕೇಳಿದ್ದಕ್ಕೆ ಕೋಪಗೊಂಡು ಮಗನನ್ನು ಹತ್ಯೆ ಮಾಡಿದ್ದಾಗಿ ವೀರರಾಜು ಪೋಲೀಸರ ತನಿಖೆಯ ವೇಳೆ ತಿಳಿಸಿದ್ದಾನೆ. ಹತ್ಯೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಲ್ಲಿದೆ ನೋಡಿ,

Watch Video

video
error: Content is protected !!