fbpx

Please assign a menu to the primary menu location under menu

ಮರದ ಕೊಂಬೆಯಲ್ಲಿದ್ದ ಅಳಿಲನ್ನು ಮರಹತ್ತಿ ನೆಗೆದು ಬೇಟೆಯಾಡಿದ ಚಿರತೆ, ವೈರಲ್ ವಿಡಿಯೋ ನೋಡಿ

ಚಿರತೆಯೊಂದು(Leopard) ಅಳಿಲನ್ನು ಹಿಡಿಯುವ ಪ್ರಯತ್ನದಲ್ಲಿ ಮರಹತ್ತಿ ಜಿಗಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿರತೆಯೊಂದು ಅಳಿಲನ್ನು ಬೇಟೆಯಾಡುವ ಸಮಯದಲ್ಲಿ ಅಳಿಲು ಮರ ಏರಿದೆ. ಆದರೂ ಬೇಟೆಯನ್ನು ಬಿಡಲು ಒಪ್ಪದ ಚಿರತೆ ಮರ ಹತ್ತಿ ಅಳಿಲನ್ನು ಹಿಂಬಾಲಿಸಿದೆ.

ಅಳಿಲು ಕೊಂಬೆಯಿಂದ ಕೊಂಬೆಗೆ ಹಾರುತ್ತಾ ಮರತ ತುದಿಗೆ ತಲುಪಿದ್ದು, ಚಿರತೆಯೂ ಅಳಿಲಿನ ಹಿಂದೆಯೇ ಸಾಗಿದೆ. ಮರದ ತುತ್ತತುದಿ ತಲುಪಿದ ಅಳಿಲು ಇನ್ನೊಂದು ಮರಕ್ಕೆ ನೆಗೆಯುವ ಸಂದರ್ಭದಲ್ಲಿ ಚಿರತೆಯೂ ನೆಗೆದು ಅಳಿಲನ್ನು ಹಿಡಿದು ನೆಲಕ್ಕೆ ಬಿದ್ದಿದೆ.

ದಕ್ಷಿಣ ಆಫ್ರಿಕಾದ ಕೃಗರ್ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯಜೀವಿಗಳ ಛಾಯಾಚಿತ್ರಗಳನ್ನು ತೆಗೆಯುವ ಸಂದರ್ಭದಲ್ಲಿ ರೆಂಜರ್ ‘ಜೆನ್ನಿ ಚಿನ್’ ಎಂಬುವವರು ಈ ಅದ್ಭುತ ವಿಡಿಯೋವನ್ನು ಸೆರೆಹಿಡಿದಿದ್ದಾರೆ. ತಾನು ಎರಡು ವರ್ಷಗಳಿಂದ ಇದೇ ವನ್ಯಧಾಮದಲ್ಲಿ ಕೆಲಸ ಮಾಡುತ್ತಿದ್ದು ಇಂತಹ ದೃಶ್ಯವನ್ನು ನೋಡಿಲ್ಲ ಎಂದು ಅವರು ಹೇಳಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!