fbpx

Please assign a menu to the primary menu location under menu

ತನ್ನ ಬಂಡಿ ಹೊರೋ ಎತ್ತಿನ ಜೊತೆ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿರುವ ರೈತ, ವಿಡಿಯೋ ಸಖತ್ ವೈರಲ್

ಭಾರತ ಸಂಪ್ರದಾಯ ಹಾಗೂ ಹಿಂದೂ ಧರ್ಮದಲ್ಲಿ ಗೋವುಗಳಿಗೆ ವಿಶೇಷವಾದ ದೇವತೆಯ ಸ್ಥಾನ ನೀಡಲಾಗಿದೆ. ಗೋಮಾತೆಯನ್ನು ತಾಯಿಯ ಸಮಾನವಾಗಿ ಗೌರವಿಸಿ, ಪೂಜಿಸೋದು ಈ ನೆಲದ ಸಂಸ್ಕಾರ.

ಕೃಷಿ ಪ್ರಧಾನವಾಗಿರುವ ಭಾರತದಲ್ಲಿ ರೈತ ದೇಶದ ಬೆನ್ನೆಲುಬಾದ್ರೆ, ನೆಲ ಮತ್ತು ಎತ್ತುಗಳು ರೈತನ ಎರಡು ಆಧಾರಗಳು. ಕೃಷಿಯನ್ನೇ ನೆಚ್ಚಿಕೊಂಡಿರುವ ರೈತರಿಗೆ ಎತ್ತುಗಳು ಎರಡು ಕಣ್ಣುಗಳಿದ್ದಂತೆ. ತಾವು ಬೆಳೆದ ಬೆಳೆಗಳನ್ನು ಸಾಗಿಸೋಕೆ ರೈತರು ಎತ್ತಿನ ಗಾಡಿಗಳನ್ನು ಬಹಳ ಹಿಂದಿನಿಂದಲೂ ಬಳಸುತ್ತಿದ್ದಾರೆ.

ಆದರೆ ಈಗೀಗ ಟ್ರಾಕ್ಟರ್ ಬಳಕೆಯಿಂದಾಗಿ ಎತ್ತಿನ ಬಂಡಿಗಳು ಕಾಣಸಿಗೋದು ಅಪರೂಪ. ಇಲ್ಲೊಬ್ಬ ರೈತ ತನ್ನ ಬಂಡಿ ಹೊರುವ ಎತ್ತಿನ ಜೊತೆ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಚಿತ್ರದುರ್ಗದ ಜಿಲ್ಲೆಯ ಹಿರಿಯೂರು ತಾಲೂಕಿನ ರಂಗೇನಹಳ್ಳಿ ನಿವಾಸಿ ಅವಿನಾಶ್ ಎಂಬುವವರು ತನ್ನ ಪ್ರೀತಿಯ ಎತ್ತಿನ ಜೊತೆ ಒಂದೇ ತಟ್ಟೆಯಲ್ಲಿ ಊಟ ಮಾಡೋದಷ್ಟೇ ಅಲ್ಲದೆ, ತನ್ನ ಕೈತುತ್ತನ್ನೂ ತಿನ್ನಿಸಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!