fbpx

ನಾಯಿ ದಾಳಿಗೆ ಸಿಲುಕಿ ಮಹಿಳೆ ರಸ್ತೆಯಲ್ಲಿ ಒದ್ದಾಡುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿದ್ದರೆ, ಈ ಕಾರು ಚಾಲಕ ಮಾಡಿದ್ದೇನು ನೋಡಿ (ವೈರಲ್ ವಿಡಿಯೋ)

ಕೆಲವೊಮ್ಮೆ ಮನುಷ್ಯ ಎಷ್ಟೊಂದು ಕಟುಕನಾಗಿ ವರ್ತಿಸುತ್ತಾನೆ ಎಂದರೆ, ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ಮೇಲು ಎಂದು ಅನ್ನಿಸಲು ಶುರುವಾಗುತ್ತೆ. ಈ ವಿಡಿಯೋವನ್ನೆ ನೋಡಿ, ಅಸಹಾಯಕ ಮಹಿಳೆಯೊಬ್ಬರು ನಾಯಿಯ ದಾಳಿಗೆ ಒಳಗಾಗಿದ್ದರೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರ್ ಚಾಲಕನೊಬ್ಬ ಅದನ್ನು ನೋಡಿಯೂ ಸಹಾಯಕ್ಕೆ ಧಾವಿಸದೆ ಸೀದಾ ಹೊರಟು ಹೋಗಿದ್ದಾನೆ.

ರಾತ್ರಿ ವೇಳೆಯಲ್ಲಿ ಮಹಿಳೆಯೊಬ್ಬರು ಒಂಟಿಯಾಗಿ ರಸ್ತೆಯಲ್ಲಿ ಬರುತ್ತಿದ್ದರೆ, ನಾಯಿಯೊಂದು ಅಪಾರ್ಟ್‌ಮೆಂಟ್ ಒಂದರ ಒಳಗಿನಿಂದ ಸೀದ ಓಡಿ ಬಂದು ಮಹಿಳೆಯ ಮೇಲೆ ದಾಳಿ ಮಾಡಿದೆ. ಮಹಿಳೆ ಅದೆಷ್ಟೇ ಪ್ರಯತ್ನ ಪಟ್ಟರೂ ನಾಯಿಯ ದಾಳಿಯಿಂದ ತಮ್ಮನ್ನು ಬಿಡಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

img 20200813 wa00355630410933623321257

ಅದೇ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಕಾರ್ ಒಂದು ಬಂದಿದೆ. ಕಾರ್ ಚಾಲಕ ನಾಯಿ ದಾಳಿಗೆ ಸಿಲುಕಿ ಒದ್ದಾಡುತ್ತಿರುವ ಮಹಿಳೆಯನ್ನು ನೋಡಿ, ಸ್ವಲ್ಪ ಹೊತ್ತು ಅಲ್ಲೆ ನಿಲ್ಲಿಸಿದ್ದಾನೆ. ಆದರೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಮಹಿಳೆಯ ಸಹಾಯಕ್ಕೆ ಧಾವಿಸದೆ ಸೀದಾ ಹೊರಟು ಹೋಗಿದ್ದಾನೆ.

ಇದನ್ನೂ ಓದಿ:  ಮರದ ತುಂಡು ಎಂದು ಹತ್ತಿರ ಹೋದ ಮೀನುಗಾರರಿಗೆ ಸಮುದ್ರದಲ್ಲಿ ಸಿಕ್ಕಿದ್ದೇನು ನೋಡಿ, ವೈರಲ್ ವಿಡಿಯೋ

ಸ್ವಲ್ಪ ಹೊತ್ತಿನ ಬಳಿಕ ಪಕ್ಕದ ಅಪಾರ್ಟ್‌ಮೆಂಟ್‌ನಿಂದ ವ್ಯಕ್ತಿಯೊಬ್ಬರು ಕಾರ್ ಹೊರ ತಂದು ನಾಯಿಯನ್ನು ಬೆದರಿಸಿ ಓಡಿಸಿದ್ದಾರೆ. ಕೊನೆಗೂ ಮಹಿಳೆ ನಾಯಿಯ ಹಿಡಿತದಿಂದ ಪಾರಾಗಿದ್ದಾಳೆ.

ಈ ಎಲ್ಲಾ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯ ರಕ್ಷಣೆಗೆ ಧಾವಿಸದ ಕಾರು ಚಾಲಕನಿಗೆ ಜನ ಹಿಡಿಶಾಪ ಹಾಕಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!