fbpx

ಹಾಡುಹಗಲೇ ಪ್ರೇಯಸಿಯನ್ನು ಎತ್ತಾಕಿಕೊಂಡು ಹೋದ ಭೂಪ, ಬೆಚ್ಚಿಬಿದ್ದ ಕೋಲಾರದ ಜನ (ವೈರಲ್ ವಿಡಿಯೋ)

ಪರಸ್ಪರ ಪ್ರೀತಿಸಿದ್ದ ಜೋಡಿಯ ಮದುವೆಗೆ ಯುವತಿಯ ಕುಟುಂಬಸ್ಥರು ನಿರಾಕರಿಸಿದ ಕಾರಣಕ್ಕೆ ಪ್ರೇಮಿಯೊಬ್ಬ ಹಾಡುಹಗಲೇ ಪ್ರೇಯಸಿಯನ್ನು ಕಿಡ್ನಾಪ್ ಮಾಡಿದ್ದಾನೆ. ಕೋಲಾರದ ಎಂಬಿ ರಸ್ತೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್ ಅಂಗಡಿಯ ಬಳಿ ಈ ಘಟನೆ ನಡೆದಿದೆ.

ಕಾರಿನಲ್ಲಿ ಬಂದ ಯುವಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಎತ್ತಿ ಕಾರಿಗೆ ತುಂಬಿಸಿಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ಆಕೆಯ ಜೊತೆ ಇದ್ದ ಇನ್ನೊಬ್ಬ ಯುವತಿ ಎಷ್ಟೇ ಪ್ರಯತ್ನ ಪಟ್ಟರೂ ಆಕೆಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅಲ್ಲೇ ಇದ್ದ ಜನರು ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಯುವಕ ಆಕೆಯೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದ.

img 20200813 wa00251650639948869503328

ಆರೋಪಿಯನ್ನು ಶಿವ ಎಂದು ಗುರುತಿಸಲಾಗಿದ್ದು, ಅಪಹರಣಗೊಂಡಿರುವ ಯುವತಿ ಸಿರಿಶಾ ಮತ್ತು ಶಿವ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ. ಆದರೆ ಯುವತಿಯ ಕಡೆಯವರು ಇವರಿಬ್ಬರ ಮದುವೆಗೆ ಒಲ್ಲೆ ಎಂದಿದ್ದರು. ಆದರೆ ಪ್ರೀತಿಸಿದ ಯುವತಿಯನ್ನು ಬಿಟ್ಟುಕೊಡಲು ಒಪ್ಪದ ಶಿವ ಇಂದು ಕಾರಿನಲ್ಲಿ ಬಂದು ಅಪಹರಿಸಿದ್ದಾನೆ.

ಇದನ್ನೂ ಓದಿ:  ಅಪರೂಪದ ಎರಡು ತಲೆಯ ಹಾವು ಪತ್ತೆ, ವೈರಲ್ ವಿಡಿಯೋ ನೋಡಿ

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗೆ ಇಳಿದಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!