fbpx

Please assign a menu to the primary menu location under menu

ಮಚ್ಚು ತೋರಿಸಿ ಚಿನ್ನ ಕದಿಯಲು ಬಂದ ಕಳ್ಳನಿಗೆ ಹಿಗ್ಗಾಮುಗ್ಗಾ ಚಚ್ಚಿದ ಮಲೆನಾಡ ಮಹಿಳೆ, ವೈರಲ್ ವಿಡಿಯೋ ನೋಡಿ

ಮಚ್ಚನ್ನು ತೋರಿಸಿ ಚಿನ್ನ ಕದಿಯಲು ಬಂದ ಕಳ್ಳನಿಗೆ ಚಿನ್ನದಂಗಡಿಯ ಮಹಿಳಾ ಸಿಬ್ಬಂದಿಯೊಬ್ಬರು ಹಿಗ್ಗಾಮುಗ್ಗಾ ಬಾರಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನಲ್ಲಿ ನಾಗಪ್ಪ ಶೇಟ್ ಎಂಬವರಿಗೆ ಸೇರಿದ ಚಿನ್ನದಂಗಡಿಗೆ ಮಾಸ್ಕ್ ಧರಿಸಿದ ಕಳ್ಳನೊಬ್ಬ ನುಗ್ಗಿದ್ದಾನೆ.

ಮಹಿಳಾ ಸಿಬ್ಬಂದಿಗಳೇ ಹೆಚ್ಚಿರುವ ಈ ಅಂಗಡಿಯ ಬಗ್ಗೆ ಮೊದಲೇ ಮಾಹಿತಿ‌ ಕಲೆಹಾಕಿದ್ದ ಕಳ್ಳ ಏಕಾಏಕಿ ಮಚ್ಚು ತೋರಿಸುತ್ತಾ ಚಿನ್ನದ ಕೌಂಟರ್‌ಗೆ ನುಗ್ಗಿದ್ದಾನೆ. ಅಲ್ಲಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಮಚ್ಚು ನೋಡಿ ಜೀವ ಭಯದಿಂದ ಮೂಲೆಗೆ ಸರಿದಿದ್ದಾರೆ.

ಕಳ್ಳ ಕೈಗೆ ಸಿಕ್ಕ ಚಿನ್ನಾಭರಣಗಳನ್ನು ದೋಚುತ್ತಿದ್ದಂತೆ ಅಲ್ಲೇ ಇದ್ದ ಇನ್ನೋರ್ವ ಮಹಿಳಾ ಸಿಬ್ಬಂದಿ ಕೈಗೆ ಸಿಕ್ಕ ಚೈರ್ ನಿಂದ ಕಳ್ಳನ ಮೇಲೆ ದಾಳಿಗೆ ಮಾಡಿದ್ದಾರೆ‌. ಇವರಿಗೆ ಪುರುಷ ಸಿಬ್ಬಂದಿಯೋರ್ವರು ಸಾಥ್ ನೀಡಿದ್ದಾರೆ.

ಕಳ್ಳನ ಕೈಯಲ್ಲಿರುವ ಮಚ್ಚನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಮಹಿಳಾ ಸಿಬ್ಬಂದಿ ಆತನ ಮೇಲೆ ಚೈರ್‌ನಿಂದ ಹಿಗ್ಗಾಮುಗ್ಗಾ ಬಾರಿಸಿದ್ದಾರೆ. ತನ್ನ ಮೇಲೆ ದಾಳಿಯಾಗುತ್ತಿದ್ದಂತೆ ಕಳ್ಳ ಕೈಗೆ ಸಿಕ್ಕಿದ್ದಷ್ಟನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಮೂಲಕ ಧೈರ್ಯಗಿತ್ತಿ ಮಹಿಳಾ ಸಿಬ್ಬಂದಿ ಚಿನ್ನದಂಗಡಿ ಮಾಲೀಕನಿಗೆ ಲಕ್ಷಾಂತರ ರೂಪಾಯಿ ಕಳ್ಳತನವಾಗುವುದರಿಂದ ರಕ್ಷಿಸಿದ್ದಾಳೆ.

ಸದ್ಯ ಮಹಿಳೆಯ ಸಾಹಸದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

video
error: Content is protected !!