fbpx

Please assign a menu to the primary menu location under menu

ಕಾರು ಗುದ್ದಿದ ರಭಸಕ್ಕೆ ಹಾರಿ ಮ್ಯಾನ್‌ಹೋಲ್ ಒಳಗೆ ತಲೆಕೆಳಗಾಗಿ ಬಿದ್ದ ಮಹಿಳೆ, ಬೆಚ್ಚಿಬೀಳಿಸುವ ವೈರಲ್ ವಿಡಿಯೋ ನೋಡಿ

ಮನುಷ್ಯತ್ವ ಇನ್ನೂ ಸ್ವಲ್ಪವಾದರೂ ಉಳಿದಿದೆ ಅನ್ನೋದಿಕ್ಕೆ ಈ ಘಟನೆಯೇ ಸಾಕ್ಷಿ. ವೇಗವಾಗಿ ಬಂದ ಕಾರೊಂದು ಏಕಾಏಕಿ ಎಡಗಡೆ ತಿರುಗಿದ ಪರಿಣಾಮ ಎದುರುಗಡೆಯಿಂದ ವೇಗವಾಗಿ ಬರುತ್ತಿದ್ದ ಬೈಕ್ ಕಾರಿಗೆ ಅಪ್ಪಳಿಸಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಚಲಾಯಿಸುತ್ತಿದ್ದ ಮಹಿಳೆ ಏಕಾಏಕಿ ರಸ್ತೆಗೆ ಎಸೆಯಲ್ಪಟ್ಟು, ತಲೆಕೆಳಗಾಗಿ ಅಲ್ಲೇ ರಸ್ತೆ ಬದಿಯಲ್ಲಿದ್ದ ತೆರೆದ ಮ್ಯಾನ್‌ಹೋಲ್ ಒಳಗೆ ಬಿದ್ದಿದ್ದಾಳೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಮತ್ತೋರ್ವ ಬೈಕ್ ಚಾಲಕ ತಕ್ಷಣ ಮ್ಯಾನ್‌ಹೋಲ್ ಒಳಗೆ ಇಳಿದು ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾನೆ.

ಅಪಘಾತದಿಂದಾಗಿ ಮ್ಯಾನ್‌ಹೋಲ್ ಒಳಗೆ ಬಿದ್ದ ಮಹಿಳೆಗೆ ಪ್ರಜ್ಞೆತಪ್ಪಿತ್ತು. ಒಬ್ಬನಿಂದ ಆಕೆಯನ್ನು ಎತ್ತಿ ಮೇಲೆ ತರುವುದು ಅಸಾಧ್ಯವಾಗಿತ್ತು. ತಕ್ಷಣ ಅಲ್ಲೇ ಇದ್ದ ಇತರರು ಮ್ಯಾನ್‌ಹೋಲ್‌ಗೆ ಹಾಕಿದ್ದ ಮುಚ್ಚಳವನ್ನು ತೆಗೆದು ಆಕೆಯನ್ನು ಮೇಲಕ್ಕೆತ್ತಲು ಸಹಾಯ ಮಾಡಿದ್ದಾರೆ.

ಅಪಘಾತ ಮಾಡಿದ ಕಾರು ಚಾಲಕ ಶಾಕ್‌ಗೆ ಒಳಗಾಗಿದ್ದನೋ ಏನೋ, ಅತ್ತಿಂದಿತ್ತ ಓಡಾಡುತ್ತಿದ್ದನೇ ವಿನಃ ಮಹಿಳೆಯ ರಕ್ಷಣೆಗೆ ಕೈಜೋಡಿಸಿಲ್ಲ. ಇತ್ತ ಮಹಿಳೆಯನ್ನು ಮ್ಯಾನ್‌ಹೋಲ್‌ನಿಂದ ಮೇಲಕ್ಕೆತ್ತಿದ್ದೇ ತಡ, ತನ್ನ ಕಾರ್ ಮೂಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಸದ್ಯ ಅಪಘಾತದ ಸಿಸಿಟಿವಿ ದೃಶ್ಯಗಳು ‘ಡೈಲಿ ಮೈಲಿ’ ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿ ಹಲವರು ಮ್ಯಾನ್‌ಹೋಲ್ ಒಳಗೆ ಇಳಿದ ಯುವಕನನ್ನು ಶ್ಲಾಘಿಸುತ್ತಿದ್ದಾರೆ. ವೈರಲ್ ವಿಡಿಯೋ ನೋಡಿ,

Watch Video

video
error: Content is protected !!