fbpx

ದಲಿತ ಬಾಲಕಿಯ ಮೇಲೆ ಅ’ತ್ಯಾಚಾರ, ಇಬ್ಬರು ಮುಸ್ಲಿಂ ಯುವಕರ ಮೇಲೆ ಎನ್ಕೌಂಟರ್ ಮಾಡಿ ಬಂಧಿಸಿದ ಯೋಗಿ ಪೋಲೀಸರು! ವೈರಲ್ ವಿಡಿಯೋ ನೋಡಿ

ದಲಿತ ಬಾಲಕಿಯ ಮೇಲೆ ಸಾಮೂಹಿಕ ಅ’ತ್ಯಾಚಾರ ಮಾಡಿದ ಇಬ್ಬರು ಮುಸ್ಲಿಂ ಯುವಕರನ್ನು ಎನ್ಕೌಂಟರ್ ಮಾಡುವ ಮೂಲಕ ಉತ್ತರಪ್ರದೇಶದ ಪೊಲೀಸರು ಬಂಧಿಸಿದ್ದಾರೆ. 19ವರ್ಷದ ದಲಿತ ಬಾಲಕಿ ಆಗಸ್ಟ್ 4ರ ರಾತ್ರಿ ನದೀಂ ಎಂಬಾತನಿಗೆ ಸೇರಿದ ರಿಕ್ಷಾ ಹತ್ತಿದ್ದಾಳೆ. ಈ ಸಂದರ್ಭದಲ್ಲಿ ಅದೇ ರಿಕ್ಷಾದಲ್ಲಿ ಇಮ್ರಾನ್ ಎಂಬಾತನೂ ಸಂಚರಿಸುತ್ತಿದ್ದ.

ಉತ್ತರ ಪ್ರದೇಶದ ಹತ್ರಾಸ್ ನಿವಾಸಿ ಬಾಲಕಿಗೆ ಸೂರಜ್‌ಪುರದಿಂದ ಗ್ರೇಟರ್ ನೋಯ್ಡದ ಪರಿ ಚೌಕ್‌ಗೆ ತೆರಳಬೇಕಿತ್ತು. ಆದರೆ ರಿಕ್ಷಾ ಚಾಲಕ ನಿರ್ಜನ ಪ್ರದೇಶಕ್ಕೆ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿರೋದನ್ನ ಗಮನಿಸಿದ ಬಾಲಕಿ ಕಿರುಚಿದ್ದಾಳೆ. ಈ ಸಂದರ್ಭದಲ್ಲಿ ರಿಕ್ಷಾದ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಇಮ್ರಾನ್ ತನ್ನಲ್ಲಿದ್ದ ರಿವಾಲ್ವರ್ ತೋರಿಸಿ ಬಾಲಕಿಗೆ ಬೆದರಿಸಿದ್ದಾನೆ.

ಕೊನೆಗೆ ಇಬ್ಬರೂ ಬಾಲಕಿಯ ಕೈಕಾಲು ಕಟ್ಟಿ ಆಕೆಯ ಮೇಲೆ ಸಾಮೂಹಿಕ ಅ’ತ್ಯಾಚಾರ ಎಸಗಿದ್ದಾರೆ. ಈ ಸಂದರ್ಭದಲ್ಲಿ ಅದೇ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸರಿಗೆ ಬಾಲಕಿಯ ಕಿರುಚಾಟ ಕೇಳಿಸಿದೆ. ತಕ್ಷಣ ಪೋಲೀಸರು ರಿಕ್ಷಾವನ್ನು ಹಿಂಬಾಲಿಸಿಕೊಂಡು ಹೋಗಿದ್ದು, ರಿಕ್ಷಾ ನಿಲ್ಲಿಸುವಂತೆ ಎಷ್ಟೇ ಕೇಳಿಕೊಂಡ್ರು ಆರೋಪಿಗಳು ವಾಹನ ನಿಲ್ಲಿಸಿಲ್ಲ.

ಕೊನೆಗೆ ಪೋಲೀಸರು ರಿಕ್ಷಾವನ್ನೂ ಹೇಗೂ ಅಡ್ಡಹಾಕಿ ತಡೆದು ನಿಲ್ಲಿಸಿದ್ದಾರೆ‌. ಈ ಸಂದರ್ಭದಲ್ಲಿ ರಿಕ್ಷಾದಿಂದ ಕೆಳಗಿಳಿದ ಆರೋಪಿಗಳು ಪೋಲೀಸ್ ವಾಹನದ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಪೋಲೀಸರೂ ಪ್ರತಿದಾಳಿ ಮಾಡಿದ್ದು ಆರೋಪಿಗಳ ಕಾಲಿಗೆ ಗುಂಡು ತಗುಲಿದೆ.

ಇದೀಗ ಉತ್ತರ ಪ್ರದೇಶ ಪೋಲೀಸರು ವಿಡಿಯೋ ಬಿಡುಗಡೆ ಮಾಡಿದ್ದು, ಎನ್ಕೌಂಟರ್ ನಂತರ ಆರೋಪಿಗಳು ಕುಂಟುತ್ತಾ ಸಾಗುತ್ತಿರೋದನ್ನ ವಿಡಿಯೋದಲ್ಲಿ ಕಾಣಬಹುದಾಗಿದೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರ ಪ್ರಕಾರ ‘ಈ ಇಬ್ಬರು ಅತ್ಯಾಚಾರಿಗಳ ಕಾಲಿಗೆ ಗುಂಡೇಟಿನಿಂದ ಗಂಭೀರ ಗಾಯಗಳಾಗಿದ್ದು, ಈ ಇಬ್ಬರೂ ತಮ್ಮ ಮುಂದಿನ ಜೀವನವನ್ನು ಅಂಗವಿಕಲರಾಗಿಯೇ ಕಳೆಯಲಿದ್ದಾರೆ’ ಎನ್ನಲಾಗುತ್ತಿದೆ.

ಇಬ್ಬರು ಆರೋಪಿಗಳಲ್ಲಿ ನದೀಂ ಮೇಲೆ ಈ ಹಿಂದೆಯೂ ಹಲವು ಕೇಸುಗಳು ದಾಖಲಾಗಿದ್ದು, ಕೆಲ ಸಮಯಗಳ ಹಿಂದೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಜೈಲು ಪಾಲಾಗಿದ್ದ. ಇದೀಗ ಯೋಗಿ ಪೋಲೀಸರು ಇಬ್ಬರನ್ನು ಶಾಶ್ವತವಾಗಿ ಅಂಗವಿಕಲರನ್ನಾಗಿ ಮಾಡಿದ್ದಾರೆ. ಎನ್ಕೌಂಟರ್ ನಂತರದ ವಿಡಿಯೋ ಇಲ್ಲಿದೆ ನೋಡಿ

Watch Video

error: Content is protected !!