fbpx

ಕೊಕ್ಕಿನಿಂದ ಕುಕ್ಕಿ ಎಳನೀರು ಕುಡಿದ ಗಿಣಿ ರಾಮ, ವೀಡಿಯೋ‌ ಸಖತ್ ವೈರಲ್

ಕೋತಿಗಳು ತೆಂಗಿನ ತೋಟಕ್ಕೆ ಲಗ್ಗೆ ಇಟ್ಟು ಎಳನೀರು ಕುಡಿಯೋದು ಸಾಮಾನ್ಯ, ಆದರೆ‌ ಇಲ್ಲಿ ಮಕಾವ್ ಗಿಣಿಯೊಂದು (Macaw parrot) ತೆಂಗಿನ ಮರದ ಮೇಲೇರಿ ಎಳನೀರು ಕಿತ್ತು ತನ್ನ ಕೊಕ್ಕಿನಿಂದ ಕುಕ್ಕಿ ಕುಡಿದಿದೆ.

ತೆಂಗಿನ ಮರ ಏರಿದ ಗಿಣಿಯೊಂದು, ತೆಂಗಿನ ಗರಿಯ ಮೇಲೆ ಕೂತು ಎಳನೀರಿನ ಕಾಯಿಯನ್ನು ತನ್ನ ಕೊಕ್ಕಿನಿಂದ ಕಿತ್ತಿದೆ. ನಂತರ ತನ್ನ ಕಾಲಿನಿಂದ ಕಾಯಿಯನ್ನು ಗಟ್ಟಿಯಾಗಿ ಹಿಡಿದು, ಕೊಕ್ಕಿನಿಂದ ಕುಕ್ಕಿ ರಂದ್ರ ಮಾಡಿ ಎಳನೀರನ್ನು ಕುಡಿದು ತನ್ನ ದಾಹ ತೀರಿಸಿಕೊಂಡಿದೆ.


Continue Reading

img 20200810 wa00424867129894273237238

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ‘ಎಳನೀರು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಎಳನೀರು ಕುಡಿಯೋದರಿಂದ ಜೀರ್ಣಶಕ್ತಿ ವೃದ್ದಿಸುತ್ತದೆ. ಊಟದ ನಂತರ ಹೊಟ್ಟೆ ಉಬ್ಬುವುದನ್ನು ತಡೆಯುತ್ತದೆ. ಎಳನೀರಿನ ನಿಯಮಿತ ಸೇವನೆಯಿಂದ ರಕ್ತದೊತ್ತಡವೂ ಕಡಿಮೆಯಾಗುತ್ತದೆ’ ಎಂದು ಅವರು ತಮ್ಮ ವಿಡಿಯೋದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:  ಕುಡುಕ ಕಾರು ಚಾಲಕನ ಆವಾಂತರಕ್ಕೆ ಅಮಾಯಕ ಬಲಿ, ಭೀಕರ ಅಪಘಾತದ ವಿಡಿಯೋ ವೈರಲ್

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, 20ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ತೆಂಗಿನ ತೋಟದ ಮಾಲೀಕರಿಗೆ ಇಷ್ಟು ದಿನ ಕೋತಿಗಳ ಕಾಟ ಇತ್ತು, ಈಗ ಗಿಣಿ ಎಂಟ್ರಿ ಕೊಟ್ಟಿದೆ. ಇನ್ನು ದೇವ್ರೇ ಕಾಪಾಡ್ಬೇಕು’ ಎಂದು ಕೆಲವರು ಹಾಸ್ಯಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ವೈರಲ್ ವಿಡಿಯೋ ನೋಡಿ,

Watch Video

Trending Short Videos

close

This will close in 26 seconds

error: Content is protected !!