fbpx

Please assign a menu to the primary menu location under menu

‘ಆಪರೇಶನ್ ರಾಮ ಸೇತು’ ಸಕ್ಸಸ್, ಕೊನೆಗೂ ದಡ ಸೇರಿತು ಪ್ರವಾಹದಲ್ಲಿ ಸಿಲುಕಿದ್ದ ವಾನರ ಸೇನೆ (ವೈರಲ್ ವಿಡಿಯೋ)

ಭಾರೀ ಮಳೆಯ ಕಾರಣ ಉಕ್ಕಿ ಹರಿಯುತ್ತಿರುವ ತುಂಗಭದ್ರಾ ನದಿ ಪ್ರವಾಹದಲ್ಲಿ ಸಿಲುಕ್ಕಿದ್ದ 60ಕ್ಕೂ ಹೆಚ್ಚು ಮಂಗಗಳನ್ನು ರಕ್ಷಿಸುವಲ್ಲಿ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ದಾವಣಗೆರೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಈ ಘಟನೆ‌‌ ನಡೆದಿದೆ.

ತುಂಬಿ ಹರಿಯುತ್ತಿದ್ದ ನದಿಯ ಮಧ್ಯದಲ್ಲಿನ ಮರದ ಮೇಲೆ ಆಹಾರವಿಲ್ಲದೆ ಕೋತಿಗಳು ಸಿಲುಕಿದ್ದವು. ತಕ್ಷಣ ಕಾರ್ಯಪ್ರವೃತ್ತರಾದ ರಕ್ಷಣಾ ಸಿಬ್ಬಂದಿ ಆಪರೇಶನ್ ‘ರಾಮ ಸೇತು’ ಮೂಲಕ ಸಂಕಷ್ಟದಲ್ಲಿದ್ದ ಎಲ್ಲಾ ವಾನರರನ್ನು ರಕ್ಷಿಸಿದ್ದಾರೆ.

ಮೂರು ದಿನಗಳ‌ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಹಗ್ಗ ಮತ್ತು ಬಿದಿರಿನ ಕೋಲುಗಳನ್ನು ಬಳಸಿ ಸೇತುವೆ ನಿರ್ಮಿಸಲಾಗಿದ್ದು, ವಾನರ ಸೇನೆ ಒಂದರ ಹಿಂದೆ ಒಂದರಂತೆ ಸೇತುವೆ ದಾಟಿ ದಡ ಸೇರಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ,

Watch Video

video
error: Content is protected !!