fbpx

ವಿಷಕಾರಿ ಕಾಳಿಂಗ ಸರ್ಪದ ಜೊತೆ ಪುಟ್ಟ ಮಗುವಿನ ಚಿನ್ನಾಟ, ನೋಡಿದ್ರೆ ಮೈ ಝಲ್ ಎನ್ನುತ್ತೆ (ವೈರಲ್ ವಿಡಿಯೋ)

ಹಾವು ಅಂದ್ರೆ ಯಾರಿಗೆ ತಾನೆ ಭಯ ಇರಲ್ಲ ಹೇಳಿ, ನಾವು ಸಾಧಾರಣ ಕೇರೆ ಹಾವು ಕಂಡ್ರು ಸಾಕು ಎದ್ದುಬಿದ್ದು ಓಡಿಹೋಗ್ತೇವೆ. ಆದರೆ ಇಲ್ಲೊಂದು ಮಗು ಹಾವುಗಳಲ್ಲೇ ಹೆಚ್ಚು ವಿಷಕಾರಿಯಾಗಿರುವ ಕಾಳಿಂಗ ಸರ್ಪದ ಜೊತೆ ಚಿನ್ನಾಟವಾಡುತ್ತಿದೆ.

ಕಾಳಿಂಗ ಸರ್ಪಗಳು ಅತ್ಯಂತ ವಿಷಕಾರಿ ಹಾವಿನ ಪ್ರಭೇದಗಳಲ್ಲಿ ಒಂದು, ಸುಮಾರು 18-20ಅಡಿ ಉದ್ದ ಬೆಳೆಯಬಲ್ಲ ಈ ಹಾವುಗಳು ಕಚ್ಚಿದ್ರೆ ಬದುಕೋದೆ ಡೌಟ್. ಆದ್ರೆ ಪುಟ್ಟ ಮಗು ಮಾತ್ರ ಅದೇ ಕಾಳಿಂಗ ಸರ್ಪದ ಜೊತೆ ಆಟವಾಡುತ್ತಿದೆ.

ಮಗು ತನ್ನ ಕೈಯಿಂದ ಹಾವನ್ನು ಅತ್ತಿಂದ ಇತ್ತ ಎತ್ತಿ ಹಾಕೋದು, ಕಾಲಿನಿಂದ ತುಳಿಯೋದು ಮಾಡಿದ್ರೂ ಹಾವು ಮಾತ್ರ ಒಮ್ಮೆಯೂ ಮಗುವಿನ ಮೇಲೆ ಬುಸುಗುಟ್ಟಿಲ್ಲ. ಕೆಲವರ ಪ್ರಕಾರ ಈ ಹಾವು ಮಗುವಿನ ಮೇಲೆ ವಿಷಕಾರದಂತೆ ಅದರ ಹಲ್ಲುಗಳನ್ನು ಕೀಳಲಾಗಿದೆ ಎನ್ನಲಾಗುತ್ತಿದೆ.

ಏನೇ ಆಗ್ಲಿ ಪ್ಲಾಸ್ಟಿಕ್ ಹಾವನ್ನು ಕಂಡರೆ ಓಡಿ ಹೋಗುವ ಮಕ್ಕಳ ನಡುವೆ ದೈತ್ಯ ಕಾಳಿಂಗ ಸರ್ಪದ ಜೊತೆ ಆಟವಾಡುತ್ತಿರುವ ಈ ಮಗುವಿನ ಧೈರ್ಯವನ್ನು ಮೆಚ್ಚಲೇ ಬೇಕು, ಏನಂತೀರ?. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!