fbpx

ಈ ರೀತಿ ಮೀನು ಹಿಡಿಯೋದನ್ನ ನೀವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ (ವೈರಲ್ ವಿಡಿಯೋ)

ದೇಶದಲ್ಲಿ ಹಲವು ಸಮುದಾಯಗಳು ತಮ್ಮ ಪ್ರಾಚೀನ ಸಂಪ್ರದಾಯಗಳನ್ನು ಇನ್ನೂ ಜೀವಂತವಾಗಿ ಉಳಿಸಿಕೊಂಡಿದ್ದಾರೆ. ಆಧುನಿಕತೆಯ ಭರಾಟೆಯಲ್ಲಿ ಅದೆಷ್ಟೋ ಸಂಪ್ರದಾಯಗಳು ನಶಿಸಿ ಹೋಗಿವೆ, ಆದರೆ ಕೆಲವು ಸಮುದಾಯಗಳು ಮಾತ್ರ ಈ ಆಧುನಿಕ ಯುಗದಲ್ಲಿಯೂ ತಮಗೆ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಸಂಪ್ರದಾಯ ಬಿಟ್ಟುಕೊಟ್ಟಿಲ್ಲ.

ನಾವು ಈಗ ಹೇಳ ಹೊರಟಿರೋದು ಭಾರತದ ನಾಗಾಲ್ಯಾಂಡ್ ರಾಜ್ಯದಲ್ಲಿ ಕಂಡು ಬರುವ ಸುಮಿ ನಾಗಾ ಸಮುದಾಯದ ಮೀನು ಹಿಡಿಯುವ ವಿಶಿಷ್ಟ ಕಲೆಯನ್ನು. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ.

img 20200809 wa00284956086102597064846

ಸುಮಿ ನಾಗಾ ಸಮುದಾಯದ ಗಂಡಸರು ಮರಗಳನ್ನು ಕಡಿದು ನದಿನೀರಿನ ಹರಿವಿಗೆ ಅಡ್ಡಲಾಗಿ ಇಟ್ಟು ಅದಕ್ಕೆ ಮರದ ಕೋಲುಗಳಿಂದ ಜೋರಾಗಿ ಬಡಿಯುತ್ತಾರೆ. ಈ ಸಂದರ್ಭದಲ್ಲಿ ಆ ಮರದಿಂದ ಹೊರಸೂಸುವ ದ್ರವ ಪದಾರ್ಥ ನದಿನೀರಿನಲ್ಲಿ ಬೆರೆತು ನೀರಿನಲ್ಲಿರುವ ಆಕ್ಸಿಜನ್ ಪ್ರಮಾಣವನ್ನು ಸ್ವಲ್ಪ ಸಮಯದವರೆಗೆ ಕಮ್ಮಿ ಮಾಡುತ್ತವೆ.

ಇದನ್ನೂ ಓದಿ:  ಎರಡು ಮರದ ದಿಣ್ಣೆಗಳ ಮೇಲೆ ಕಾರು ಚಲಾಯಿಸುವ ಸಾಹಸಕ್ಕೆ ಕೈ ಹಾಕಿದ! ಮುಂದೇನಾಯಿತು ನೋಡಿ (ವೈರಲ್ ವಿಡಿಯೋ)

ಇದರಿಂದಾಗಿ ಅಷ್ಟು ವ್ಯಾಪ್ತಿಯ ನೀರಿನಲ್ಲಿರುವ ಎಲ್ಲಾ ಮೀನುಗಳು ಸತ್ತುಹೋಗುತ್ತವೆ. ಇದೊಂದು ಮೀನು ಹಿಡಿಯುವ ವಿಶಿಷ್ಟ ಸಂಪ್ರದಾಯವಾಗಿದ್ದು, ನದಿ ನೀರಿಗೆ ಯಾವುದೇ ರೀತಿಯಲ್ಲಿ ವಿಷಬೆರೆಸದೆ ಮೀನು ಹಿಡಿಯಲಾಗುತ್ತದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಇಲ್ಲಿದೆ ನೋಡಿ.

Watch Video

video

Trending Short Videos

error: Content is protected !!