fbpx

ಮೊಲ vs ಆಮೆ, ರೇಸ್‌ನಲ್ಲಿ ಗೆದ್ದಿದ್ಯಾರು ನೋಡಿದ್ರೆ ಶಾಕ್ ಆಗ್ತೀರ (ವೈರಲ್ ವಿಡಿಯೋ)

ಮೊಲ ಮತ್ತು ಆಮೆ ನಡುವೆ ಓಟದ ಪಂದ್ಯದ ಹಳೆಯ ಕಥೆ ನೆನಪಿದೆಯಾ? ನಾವು ಮೊಲ ಮತ್ತು ಆಮೆಯ ಓಟದ ಕಥೆಯನ್ನು ಶಾಲಾ ದಿನಗಳಲ್ಲಿ ಕೇಳಿದ್ದೆವು‌. ಇದರಲ್ಲಿ ಆಮೆಯು ತನ್ನ ನಿಧಾನ ನಡಿಗೆಯ ಹೊರ ತಾಗಿಯೂ ಸ್ಪರ್ಧೆಯಲ್ಲಿ ಗೆಲ್ಲುತ್ತದೆ. ಇದು ಅದೇ‌ ರೀತಿಯ ಪಂದ್ಯದ ನೈಜ ಕಥೆ, ಆದರೆ ಫಲಿತಾಂಶ ಮಾತ್ರ ಇಲ್ಲೂ ಅದೆ.

ಮೊಲ ಮತ್ತು ಆಮೆಯ ನಡುವೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೊಲ ಓಡುವುದರಲ್ಲಿ ನಿಸ್ಸೀಮ, ಹೀಗಾಗಿ ಮೊಲವೇ ಗೆದ್ದುಬಿಡಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ಎಲ್ಲರ ಊಹೆಗೆ ತದ್ವಿರುದ್ಧವಾಗಿ ಆಮೆ ಪಂದ್ಯದಲ್ಲಿ ಗೆದ್ದು ವಿಜಯ ಶಾಲಿಯಾಗಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಒಂದೇ ಸಮಯಕ್ಕೆ ಓಟ ಶುರು ಮಾಡಿದ ಎರಡೂ ಪ್ರಾಣಿಗಳಲ್ಲಿ ಮೊಲ ಮೊದಲಿಗೆ ವೇಗವಾಗಿ ಓಡಿ ಅರ್ಧ ದಾರಿ ಕ್ರಮಿಸಿತ್ತು. ಆಮೇಲೆ ಒಮ್ಮೆಗೆ ಏನಾಯಿತೋ ಏನೋ ಸುತ್ತಮುತ್ತ ನೆರೆದಿದ್ದ ಜನರನ್ನೇ ನೋಡುತ್ತಾ ಅರ್ಧ ದಾರಿಯಲ್ಲಿಯೇ ನಿಂತು ಬಿಟ್ಟಿದೆ.

ಆದರೆ ಆಮೆ ಮಾತ್ರ ನಿಧಾನವಾಗಿ ಓಡಿ ವಿಜಯದ ಗೆರೆಯನ್ನು ದಾಟಿದೆ. ಈ ಮೂಲಕ ನಮಗೆ ಹಿರಿಯರು ಹೇಳಿದ ಆಮೆ ಮತ್ತು ಮೊಲದ ಕಥೆಯನ್ನು ನಿಜವಾಗಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಲ್ಲಿದೆ ನೋಡಿ ವಿಡಿಯೋ.

Watch Video

video

error: Content is protected !!