fbpx

Please assign a menu to the primary menu location under menu

ಉಕ್ಕಿ ಹರಿಯುತ್ತಿರುವ ನೀರಿನ ಮಧ್ಯೆ ಕಾಲು ಸೇತುವೆ ಸರಿಮಾಡಲು ಯುವಕನ ಹರಸಾಹಸ, ವೈರಲ್ ವಿಡಿಯೋ ನೋಡಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟಕ್ಕೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಕರಾವಳಿ ಜಿಲ್ಲೆಗಳಲ್ಲೂ ಮಳೆರಾಯನ ಆರ್ಭಟ ಜೋರಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯ ಆರ್ಭಟಕ್ಕೆ ನದಿ, ಕೆರೆ, ಹಳ್ಳಗಳು ಉಕ್ಕಿ ಹರಿಯುತ್ತಿದೆ. ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು, ಸುತ್ತಮುತ್ತಲಿನ ಹಳ್ಳಿಗಳಿಗೆ ನೆರೆನೀರು ನುಗ್ಗಿದೆ. ಬೆಳ್ತಂಗಡಿಯ ದಿಡುಪೆಯಲ್ಲಿ ಸ್ಥಳೀಯ ಜನರು ಹಳ್ಳ ದಾಟಲು ಬಳಸುವ ಕಾಲು ಸೇತುವೆ ಮಳೆಯ ರಭಸಕ್ಕೆ ಕೊಚ್ಚಿ ಹೋಗುವ ಸ್ಥಿತಿಯಲ್ಲಿತ್ತು.

ಸ್ಥಳೀಯ ಜನರಿಗೆ ಮಳೆಗಾಲದಲ್ಲಿ ಹಳ್ಳ ದಾಟಲು ಈ ಅಡಿಕೆ ಮರದ ದಿಮ್ಮಿಯ ಸೇತುವೆ ಅತ್ಯಗತ್ಯವಾಗಿದ್ದು, ಯುವಕನೋರ್ವ ಉಕ್ಕಿ ಹರಿಯುತ್ತಿರುವ ಪ್ರವಾಹ ನೀರಿನ್ನೂ ಲೆಕ್ಕಿಸದೆ ಹಳ್ಳಕ್ಕಿಳಿದು ಕಾಲು ಸೇತುವೆಯನ್ನು ಗಟ್ಟಿಗೊಳಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Watch Video

error: Content is protected !!