fbpx

ಮರದ ದಿಮ್ಮಿಯಲ್ಲಿ ಸಿಕ್ಕಿ ನರಳಾಡುತ್ತಿದ್ದ ಮರಿ ಕೋತಿಯನ್ನು ಶ್ವಾನ ಯಾವರೀತಿ ರಕ್ಷಣೆ ಮಾಡಿದೆ ನೋಡಿ (ವೈರಲ್ ವಿಡಿಯೋ)

ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡೋದು ದೇವರ ಕೆಲಸ ಮಾಡಿದ್ದಕ್ಕೆ ಸಮ, ಆದರೆ ಈಗೀಗ ಮನುಷ್ಯ ಈ ಗುಣವನ್ನು ಮರೆತುಬಿಟ್ಟಿದ್ದಾನೆ. ಈ ಮೊಬೈಲ್ ಯುಗ ಬಂದ ಮೇಲಂತು ಯಾರದ್ರೂ ಸಂಕಷ್ಟದಲ್ಲಿದ್ದರೆ ಸಾಕು ಪೋಟೋ, ವಿಡಿಯೋ ತೆಗೆದು ಹಂಚೋದೆ ಕಾಯಕವಾಗಿದೆ.

ಮರಿ ಕೋತಿಯೊಂದು ಮರದ ದಿಮ್ಮಿಯಲ್ಲಿ ಸಿಕ್ಕಿಹಾಕಿಕೊಂಡು ನರಳಾಡುತ್ತಿದ್ದರೆ, ಅಲ್ಲೇ ಇದ್ದ ವ್ಯಕ್ತಿ ಅದನ್ನು ರಕ್ಷಣೆ‌ ಮಾಡೋದು ಬಿಟ್ಟು ವಿಡಿಯೋ ಮಾಡಿದ್ದಾನೆ. ಆಟವಾಡುತ್ತಾ ಮರಿ ಕೋತಿಯೊಂದು ಮರದ ದಿಮ್ಮಿಯ ಮಧ್ಯದಲ್ಲಿದ್ದ ರಂಧ್ರದಲ್ಲಿ ಸಿಕ್ಕಿಹಾಕಿಕೊಂಡಿತ್ತು.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಹೊರಬರಲು ಎಷ್ಟೇ ಪ್ರಯತ್ನ ಮಾಡಿದ್ರೂ ಅದಕ್ಕೆ ಸಾಧ್ಯವಾಗಿಲ್ಲ. ಅಲ್ಲೇ ಇದ್ದ ವ್ಯಕ್ತಿ ಇದನ್ನು ನೋಡಿ ರಕ್ಷಣೆ ಮಾಡೋದು ಬಿಟ್ಟು ಅದು ನರಳಾಡೋದನ್ನು ವಿಡಿಯೋ ಮಾಡಿದ್ದಾನೆ. ಕೊನೆಗೆ ಶ್ವಾನದ ಮರಿಯೊಂದು ಮರಿಕೋತಿಯ ರಕ್ಷಣೆಗೆ ಧಾವಿಸಿದೆ.

ತನ್ನ ಬಾಯಿಯಲ್ಲಿ ಕಚ್ಚಿ ಕೋತಿ ಮರಿಯನ್ನು ದಿಮ್ಮಿಯ ರಂಧ್ರದಿಂದ ಹೊರಗೆಳೆದಿದೆ. ವಿಡಿಯೋ ನೋಡಿದ ಕೆಲವರು, ‘ಆ ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಬೇಕೆಂದೇ ಮರಿ ಕೋತಿಯನ್ನು ಆ ದಿಮ್ಮಿಯ ರಂಧ್ರದಲ್ಲಿ ಸಿಕ್ಕಿಸಿದ್ದಾನೆ’ ಎಂದು ಕಿಡಿಕಾರಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ,

Watch Video

video

error: Content is protected !!