fbpx

ಕೋಳಿ ಮರಿಯ ಯೋಗಾಸನಕ್ಕೆ ನೆಟ್ಟಿಗರು ಫಿದಾ, ವಿಡಿಯೋ ಸಖತ್ ವೈರಲ್

ಯೋಗ ಮಾಡೋಕೆ‌ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಭಾರತ ಪ್ರಪಂಚಕ್ಕೆ ಕೊಡುಗೆಯಾಗಿ ನೀಡಿದ ಅತ್ಯಮೂಲ್ಯ ವಿದ್ಯೆಗಳಲ್ಲಿ ಯೋಗವೂ ಒಂದು. ಯೋಗದಲ್ಲಿ ದೇಹದ ಜೊತೆ ಮನಸ್ಸು , ಬುದ್ದಿ, ಬಾವನೆ, ಆತ್ಮ ಹಾಗೂ ಅಹಂಕಾರಗಳನ್ನು ಕೂಡಿಸುವುದನ್ನು ಅಭ್ಯಾಸ ಮಾಡಲಾಗುತ್ತದೆ.

ಅಲ್ಲದೆ ಅದೆಷ್ಟೋ ಕಾಯಿಲೆಗಳನ್ನು ಯೋಗದಿಂದಲೇ ಗುಣಪಡಿಸಬಹುದು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಕೋಳಿಮರಿಯೊಂದು ಯೋಗಾಸನ ಮಾಡುವ ರೀತಿಯ ವಿಡಿಯೋವೊಂದು ವೈರಲ್ ಆಗಿದೆ. ಕೋಳಿ ಮರಿ ತನ್ನ ಬೆನ್ನನ್ನು ಹಿಂದಕ್ಕೆ ಬಾಗಿಸಿ ಉಸ್ತ್ರಾಸನ ಮಾಡಿದಂತೆ ಪೋಸ್ ಕೊಟ್ಟಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವರು, ‘ಕೋಳಿ ಮರಿಗೆ ಬೆನ್ನು ನೋವು ಇತ್ತೇನೋ ಅದಕ್ಕೆ ಯೋಗ ಮಾಡ್ತಿದೆ’ ಎಂದು ಕಮೆಂಟ್ ಹಾಕಿದ್ದಾರೆ. ಇನ್ನು ಕೆಲವರು, ‘ಈ ಕೋಳಿಮರಿ ಟಿವಿಯಲ್ಲಿ ಯೋಗ ಗುರು ರಾಮ್‌ದೇವ್ ಅವರ ಕಾರ್ಯಕ್ರಮ ನೋಡಿರಬೇಕು’ ಎಂದು ಕಮೆಂಟ್ ಹಾಕಿದ್ದಾರೆ‌. ಇಲ್ಲಿದೆ ನೋಡಿ ಕೋಳಿಮರಿಯ ಯೋಗ ಮಾಡುವ ವಿಡಿಯೋ,

Watch Video

error: Content is protected !!