fbpx

Please assign a menu to the primary menu location under menu

ನೋಡನೋಡುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ನೆರೆನೀರಿನಲ್ಲಿ ಕೊಚ್ಚಿಹೋದ ಪಿಕಪ್ ವಾಹನ (ವೈರಲ್ ವಿಡಿಯೋ)

ರಾಜ್ಯದ ಹಲವು ಭಾಗದಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕರಾವಳಿಯಲ್ಲಿಯೂ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಇದೀಗ ಉಪ್ಪಿನಂಗಡಿಯ ನೆಲ್ಯಾಡಿ ಎಂಬಲ್ಲಿ ಪಿಕ್‌ಅಪ್ ವಾಹನವೊಂದು ತುಂಬಿಹರಿಯುತ್ತಿದ್ದ ಹೊಳೆಯಲ್ಲಿ ಕೊಚ್ಚಿಹೋಗಿದೆ.

ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿಗೆ ಸಂಚರಿಸುತ್ತಿದ್ದ ಪಿಕಪ್ ವಾಹನವು ಆಯಾತಪ್ಪಿ ರಸ್ತೆಯ ಬದಿಯಲ್ಲಿ ತುಂಬಿ ಹರಿಯುತ್ತಿದ್ದ ಹೊಳೆಗೆ ಬಿದ್ದಿದೆ. ಚಾಲಕ ಆರೀಫ್ ತಕ್ಷಣವೇ ವಾಹನದಿಂದ ಹೊರಜಿಗಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ.

ಘಟನೆಯ ಸಂದರ್ಭದಲ್ಕಿ ಅಲ್ಲೇ ಇದ್ದ ತೌಫೀಕ್ ಎಂಬವರು ತಕ್ಷಣವೇ ನೀರಿಗಿಳಿದು ಕೊಚ್ಚಿಹೋಗುತ್ತಿದ್ದ ಪಿಕಪ್ ವಾಹನಕ್ಕೆ ಹಗ್ಗ ಕಟ್ಟಿ ಸ್ಥಳೀಯರ ಸಹಕಾರದೊಂದಿಗೆ ಪಿಕಪ್ ವಾಹನವನ್ನು ನೀರಿನಿಂದ ಮೇಲಕ್ಕೆ ಎತ್ತಿದ್ದಾರೆ. ಪಿಕಪ್ ವಾಹನ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವಿಡಿಯೋ,

Watch Video

error: Content is protected !!