fbpx

ತೋಟದ ಕೆಲಸಕ್ಕೆ ಹೋಗಿ ಕಾಣೆಯಾಗಿದ್ದ ಯುವಕ ಕೊನೆಗೆ ಪತ್ತೆಯಾಗಿದ್ದೆಲ್ಲಿ ನೋಡಿ (ವೈರಲ್ ವಿಡಿಯೋ)

ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ತನ್ನ ತೊಟಕ್ಕೆ ಕೆಲಸ ಮಾಡಲು ಹೋಗಿದ್ದ ಅಕ್ಬರ್ ಎಂಬ ಯುವಕ ಏಕಾಏಕಿ ಕಾಣೆಯಾಗಿದ್ದ, ಎಲ್ಲೇ ಹುಡುಕಿದರೂ ಸಿಕ್ಕಿರಲಿಲ್ಲ. ಕೊನೆಗೆ ಆತನ ಕುಟುಂಬಸ್ಥರು ಪೋಲೀಸರ ಮೊರೆ ಹೋಗಿದ್ದಾರೆ.

ಪೋಲೀಸರು ಸ್ಥಳೀಯರ ಸಹಾಯದಿಂದ ತೋಟದ ತುಂಬೆಲ್ಲ ಹುಡುಕಾಟ ನಡೆಸಿದ್ದಾರೆ. ಆದರೆ ಕಾಣೆಯಾದ ಯುವಕನ ಪತ್ತೆಯೇ ಇಲ್ಲ, ಕೊನೆಗೆ ತೋಟದ ಬದಿಯಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು ಪತ್ತೆಯಾಗಿದೆ. ಸುಮಾರು 23ಅಡಿ ಉದ್ದವಿದ್ದ ಹೆಬ್ಬಾವು ಎಲ್ಲಿಯೂ ಚಲಿಸದೆ ಇದ್ದಲ್ಲೇ ಬಿದ್ದುಕೊಂಡಿತ್ತು.

ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಲ್ಲಿಗೆ ಬಂದ ಪೋಲೀಸರು, ಹೆಬ್ಬಾವಿನ ಹೊಟ್ಟೆಯ ಕಡೆ ನೋಡಿದಾಗ ಅದು ಏನೋ ಭಾರೀ ಗಾತ್ರದ ಪ್ರಾಣಿಯನ್ನು ನುಂಗಿದಂತೆ ಕಂಡು ಬಂದಿದೆ. ತಕ್ಷಣ ಅದರ ಹೊಟ್ಟೆಯನ್ನು ಓಪನ್ ಮಾಡಲು ತಯಾರಿ ನಡೆಸಿದ್ದಾರೆ.

ಸ್ಥಳೀಯರ ಸಹಾಯದಿಂದ ಹೆಬ್ಬಾವಿನ ಹೊಟ್ಟೆಯನ್ನು ಬಗೆದು ನೋಡಿದಾಗ ಅದರ ಹೊಟ್ಟೆಯಲ್ಲಿ ಕಾಣಿಯಾಗಿದ್ದ ಯುವಕನ ಶವ ಪತ್ತೆಯಾಗಿದೆ. ಹೆಬ್ಬಾವು ಆತ ಧರಿಸಿದ್ದ ಬಟ್ಟೆ, ಶೂ ಸಮೇತ ಆತನನ್ನು ಹೊಟ್ಟೆಗೆ ಇಳಿಸಿಕೊಂಡಿದೆ. ಈ ಘಟನೆ 2017ರಲ್ಲಿ ನಡೆದಿದ್ದು, ಇದೀಗ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Watch Video

error: Content is protected !!