fbpx

ಮೆಕ್‌ಡೊನಾಲ್ಡ್ಸ್‌ನಿಂದ ಚಿಕನ್ ತರಿಸಿ ತಿನ್ನಲು ಹೋದವರಿಗೆ ಅದರೊಳಗೆ ಸಿಕ್ಕಿದ್ದೇನು ನೋಡಿ (ವೈರಲ್ ವಿಡಿಯೋ)

ಪ್ರಖ್ಯಾತ ಫುಡ್ ಚೈನ್ ಕಂಪನಿ ಮೆಕ್‌ಡೊನಾಲ್ಡ್ಸ್ ನಿಂದ ಚಿಕನ್ ತರಿಸಿಕೊಂಡು ತಿನ್ನಲು ಹೋದ ತಾಯಿ-ಮಗಳು ಅದರೊಳಗಿದ್ದ ವಸ್ತುವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಘಟನೆ ನಡೆದಿರೋದು ಇಂಗ್ಲೆಂಡ್‌ನಲ್ಲಿ, ತಾಯಿ-ಮಗಳು ಮೆಕ್‌ಡೊನಾಲ್ಡ್ಸ್‌ನಿಂದ ಚಿಕನ್ ನಗ್ಗೆಟ್ಸ್ ತರಿಸಿ ತಿನ್ನಲು ಹೊರಟಿದ್ದಾರೆ.

ಇನ್ನೇನು 6 ವರ್ಷದ ಬಾಲಕಿ ಚಿಕನ್ ಒಂದು ತುಂಡು ಬಾಯಿಗೆ ಇಟ್ಟು ಕಚ್ಚಬೇಕು ಎನ್ನುವಷ್ಟರಲ್ಲಿ ಅದರೊಳಗೆ ಏನೋ ಇದೆ ಎಂದು ಗೊತ್ತಾಗಿದೆ. ತಕ್ಷಣ ಆಕೆಯ ತಾಯಿ ಮಗಳ ಕೈಯಿಂದ ಆ ಕೋಳಿ ತುಂಡನ್ನು ತೆಗೆದುಕೊಂಡು ಓಪನ್ ಮಾಡಿ ನೋಡಿದ್ದಾಳೆ. ಅದರಲ್ಲಿ ನೀಲಿ ಬಣ್ಣದ ಸರ್ಜಿಕಲ್ ಮಾಸ್ಕ್(ಮುಖಗವಸು) ಕಂಡು ಬಂದಿದ್ದು, ತಾಯಿ, ಮಗಳು ಇಬ್ಬರೂ ಶಾಕ್‌ಗೆ ಒಳಗಾಗಿದ್ದಾರೆ‌.

ಇಂಗ್ಲೆಂಡ್‌ನಲ್ಲೂ ಕರೋನಾ ಆರ್ಭಟ ಜೋರಾಗಿದ್ದು, ಈ ಸಂದರ್ಭದಲ್ಲಿ ತಿನ್ನೋ ಆಹಾರದ ಒಳಗೆ ಮಾಸ್ಕ್ ಸಿಕ್ಕರೆ ಹೇಗಾಗಬೇಡಿ. ಈ ಬಗ್ಗೆ ಮೆಕ್‌ಡೊನಾಲ್ಡ್ಸ್‌ಗೆ ದೂರು ಕೊಟ್ಟರೆ ಅವರು ಹಾರೈಕೆ ಉತ್ತರ ಕೊಟ್ಟು ತಪ್ಪಿಸಿಕೊಂಡಿದ್ದಾರೆ.

ಇದು ಸಿದ್ದ ಆಹಾರವಾಗಿದ್ದು, ಇದನ್ನು ನಾವು ಬೇರೆ ತಯಾರಕರಿಂದ ಆಮದು ಮಾಡಿಕೊಳ್ಳುತ್ತೇವೆ. ನಾವು ಇದನ್ನು ನಮ್ಮ ಮೆಕ್‌ಡೊನಾಲ್ಡ್ಸ್ ಶಾಖೆಗಳಲ್ಲಿ ಬೇಯಿಸಿಕೊಡೋದಷ್ಟೆ. ಈ ಘಟನೆಯ ಬಗ್ಗೆ ನಾವು ನಮ್ಮ ಸಪ್ಲೈರ್ಸ್‌ಗಳಿಗೆ ಮಾಹಿತಿ ನೀಡಿದ್ದು, ಇನ್ನೊಮ್ಮೆ ಈರೀತಿ ಘಟನೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕೈತೊಳೆದುಕೊಂಡಿದ್ದಾರೆ.

Watch Video

error: Content is protected !!