fbpx

Please assign a menu to the primary menu location under menu

ಕೇರಳದ ಕೊಯಿಕೋಡ್‌ನಲ್ಲಿ ಭೀಕರ ವಿಮಾನ ದುರಂತ, ಅಪಘಾತದ ರಭಸಕ್ಕೆ ಎರಡು ಹೋಳಾದ ಏರ್ ಇಂಡಿಯಾ ವಿಮಾನ (ವೀಡಿಯೋ)

ಭಾರೀ ಮಳೆಯಿಂದಾಗಿ ಕೇರಳದ ಕೊಯಿಕೋಡ್‌ನಲ್ಲಿ ವಿಮಾನ ದುರಂತ ಸಂಭವಿಸಿದೆ. ಏರ್‌ ಇಂಡಿಯಾ ವಿಮಾನ ಅಪಘಾತ ಸಂಭವಿಸಿದ್ದು, ಕೋಯಿಕೊಡ್‌ನ ಕರಿಪುರ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್‌ ವೇಳೆ ಈ ಅವಘಡ ಸಂಭವಿಸಿದೆ.

ಕೇರಳದಲ್ಲಿಯೂ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ದುಬೈನಿಂದ ಬಂದ ಏರ್ ಇಂಡಿಯಾ ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ಸಮತೋಲನ ಕಳೆದುಕೊಂಡು ರನ್‌ವೇನಿಂದ ಜಾರಿ ಅಪಘಾತವಾಗಿದೆ.

ವಿಮಾನದ ರನ್‌ವೇ ಜಾರು ಮುಖವಾಗಿದ್ದು ಮಳೆಯಿಂದಾಗಿ ವಿಮಾನ ರನ್‌ವೇ ಯಿಂದ ಜಾರಿ ಈ ದುರ್ಘಟನೆ ನಡೆದಿದೆ. ಅಪಘಾತದ ಪರಿಣಾಮ ವಿಮಾನ ಎರಡು ತುಂಡಾಗಿದ್ದು, ವಿಮಾನದ ಇಬ್ಬರು ಪೈಲಟ್‌‌ಗಳು ಸಾವನ್ನಪ್ಪಿದ್ದಾರೆ.

ಅಪಘಾತಕ್ಕೀಡಾದ ವಿಮಾನದಲ್ಲಿ ವಂದೇ ಭಾರತ್ ಮಿಷನ್ ಅಡಿ ಭಾರತಕ್ಕೆ ಬರುತ್ತಿದ್ದ 180 ಪ್ರಯಾಣಿಕರು ಇದ್ದರೆಂದು ತಿಳಿದು ಬಂದಿದೆ. ಘಟನೆಯಲ್ಲಿ ಇದುವರೆಗೆ 16 ಪ್ರಯಾಣಿಕರು ಸಾವನ್ನಪ್ಪಿದ್ದು, 12ಜನರ ಸ್ಥಿತಿ ಚಿಂತಾಜನಕವಾಗಿದೆ.

Watch Video

error: Content is protected !!