fbpx

Please assign a menu to the primary menu location under menu

ನಿಧಿ ಆಸೆಗೆ ಆಂಜನೇಯಸ್ವಾಮಿ ದೇಗುಲ ಅಗೆದ್ರು, ಮುಂದೆ ನಡೆದಿದ್ದು ಮಾತ್ರ ದುರಂತ! (ವೀಡಿಯೋ)

ನಿಧಿ ಶೋಧಕ್ಕೆ ದೇವಾಲಯವನ್ನು ಅಗೆಯುವ ಸಂದರ್ಭದಲ್ಲಿ ಕಲ್ಲಿನ ಮಂಟಪ ಕುಸಿದು ಬಿದ್ದಿದ್ದು, ನಿಧಿ ಆಸೆಗೆ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ನಿಧಿ ಶೋಧಕ್ಕೆ ಹೋಗಿ ಈ ದುರ್ಘಟನೆ ನಡೆದಿದೆ.

ಹೊಸಕೋಟೆ ತಾಲೂಕಿನ ನಂದಗುಡಿಯ ಹಿಂದಿಗಾನಹಳ್ಳಿಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದ ಮಂಟಪದ ಕೆಳಗೆ ನಿಧಿ ಇದೆ ಎಂದು ಪ್ರತೀತಿ ಇತ್ತು. ಈ ಕಾರಣಕ್ಕೆ ಮೃತ ಸುರೇಶ್ ಸೇರಿ ಎಂಟು ಜನರ ತಂಡ ದೇವಾಲಯದ ಮಂಟಪದ ಕೆಳಗೆ ಅಗೆಯಲು ಶುರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಂಟಪದ ಕಂಬಗಳು ಸಡಿಲಗೊಂಡು ಛಾವಣಿ ಏಕಾಏಕಿ ಕುಸಿದುಬಿದ್ದಿದೆ.

ಕುಸಿದ ಛಾವಣಿಯ ಅಡಿಗೆ ಸಿಲುಕಿ ಸ್ಥಳಿಯ ನಿವಾಸಿ 22ವರ್ಷದ ಸುರೇಶ್ ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಶ್ರೀನಿವಾಸ್, ಮಂಜುನಾಥ್, ಸೆಬಾಸ್ಟಿನ್ ಎಂಬ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದ ನಾಲ್ವರು ತಪ್ಪಿಸಿಕೊಂಡಿದ್ದು, ನಿಧಿ ಕಳ್ಳರ ಪತ್ತೆಗೆ ಪೋಲೀಸರು ಬಲೆಬೀಸಿದ್ದಾರೆ.

Watch Video

error: Content is protected !!