ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಬೀಳುತ್ತಿದ್ದಂತೆ ಹಿಂದೂ ವಿರೋಧಿಗಳು, ಮುಸ್ಲಿಂ ಜಿ’ಹಾದಿಗಳಿಗೆ ಉರಿತ ಶುರುವಾಗಿದೆ. ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ. ಇನ್ನು ಕೆಲವರ್ಷಗಳಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಗೊಳ್ಳಲಿದೆ.
ಈ ಪ್ರಯುಕ್ತ ದೇಶವಷ್ಟೇ ಅಲ್ಲದೆ, ವಿಶ್ವದ ಹಲವು ರಾಷ್ಟ್ರಗಳಲ್ಲಿ ಭಾರೀ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಅಮೇರಿಕಾದಲ್ಲಿಯೂ ಹಿಂದೂ ಬಾಂಧವರು ಹಾಗೂ ಹಿಂದೂ ಧರ್ಮದ ಸಮರ್ಥಕರು ಭಾರೀ ಸಂಭ್ರಮಾಚರಣೆ ನಡೆಸಿದ್ದಾರೆ. ನ್ಯೂಯಾರ್ಕ್ನ ಟೈಂ ಸ್ಕ್ವೇರ್ನಲ್ಲಿ ಸಾವಿರಾರು ಹಿಂದೂ ಬಾಂಧವರು ಸೇರಿ ಭಗವಾಧ್ವಜ ಹಿಡಿದು ಇಡೀ ನಗರವನ್ನೇ ಕೇಸರಿಮಯ ಮಾಡುವ ಮೂಲಕ ರಾಮ ಮಂದಿರ ವಿರೋಧಿಗಳಿಗೆ ಉರಿ ಹತ್ತಿಸಿದ್ದರು.
ಈ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ವಿರೋಧಿಸಲು ಪಾಕಿಸ್ತಾನಿ ಮುಲ್ಲಾಗಳು ಅಲ್ಲಿಗೆ ಆಗಮಿಸಿದ್ದು, ಇವರಿಗೆ ಭಾರತೀಯ ಮುಸ್ಲಿಮರು ಹಾಗೂ ಖಾಲಿಸ್ತಾನಿ ಉಗ್ರರು ಸಾಥ್ ನೀಡಿದ್ದಾರೆ. ಆದರೆ ಈ ಸಮಯದಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಹಿಂದೂ ಬಾಂಧವರು ಜೈಶ್ರೀರಾಮ್, ಭಾರತ್ ಮಾತಾಕಿ ಜೈ ಹಾಗೂ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಅವರನ್ನು ಅಲ್ಲಿಂದ ಕಾಲ್ಕೀಳುವಂತೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.