fbpx

ತನ್ನ ಮಕ್ಕಳ ಜೊತೆ ರಸ್ತೆ ದಾಟುವಾಗ ಅಡ್ಡಬಂದ ಸೈಕಲ್ ಸವಾರನಿಗೆ ಗಜರಾಜ ಮಾಡಿದ್ದೇನು ನೋಡಿ (ವೈರಲ್ ವಿಡಿಯೋ)

ಮನುಷ್ಯರು ಹೇಗೆ ತಮ್ಮ ಮಕ್ಕಳ ಮೇಲೆ ಪ್ರೀತಿ, ಕಾಳಜಿ ಹೊಂದಿರುತ್ತಾರೋ, ಪ್ರಾಣಿಗಳು ಕೂಡ ಅದೇ ರೀತಿ ತಮ್ಮ ಮಕ್ಕಳ ಮೇಲೆ ಕಾಳಜಿ ಹೊಂದಿರುತ್ತವೆ. ತಮ್ಮ ಮಕ್ಕಳಿಗೆ ಏನಾದರೂ ತೊಂದರೆ ಉಂಟಾಗಲಿದೆ ಎಂದು ತಿಳಿದರೆ ಸಾಕು ತಕ್ಷಣ ತಮ್ಮ ಪ್ರಾಣ ಪಣಕ್ಕಿಟ್ಟಾದರೂ ತಮ್ಮ ಮಕ್ಕಳ ರಕ್ಷಣೆಗೆ ಮುಂದಾಗುತ್ತವೆ.

ಈ ಹಿಂದೆ ಇಲಿಯೊಂದು ನೀರಿನಲ್ಲಿ ಕೊಚ್ಚಿ ಹೋಗಲಿದ್ದ ತನ್ನ ಮರಿಗಳನ್ನು ರಕ್ಷಿಸಿದ ವಿಡಿಯೋ ನಾವು ನೋಡಿದ್ದೆವು, ಇದೀಗ ಆನೆಯೊಂದು ತನ್ನ ಮಕ್ಕಳನ್ನು ರಸ್ತೆ ದಾಟಿಸುವಾಗ ಅಡ್ಡ ಬಂದ ಸೈಕಲ್ ಸವಾರನನ್ನು ಅಟ್ಟಾಡಿಸಿ ಓಡಿಸಿದೆ. ಸೈಕಲ್ ಸವಾರನ ನಸೀಬು ಸರಿ ಇತ್ತೋ ಏನೋ ಆನೆಯ ದಾಳಿಯಿಂದ ರಕ್ಷಿಸಿಕೊಂಡಿದ್ದಾನೆ, ಇಲ್ಲವಾದಲ್ಲಿ ಆನೆ ದಾಳಿಗೆ ಸಿಲುಕಿ ಶಿವನ ಪಾದ ಸೇರ್ಕೋತಾ ಇದ್ದ.

ದಟ್ಟ ಅರಣ್ಯದ ಮಧ್ಯೆ ಕಾಡಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಆನೆ ತನ್ನ ಮರಿಗಳೊಂದಿಗೆ ಸಿದ್ದವಾಗಿತ್ತು. ಮರಿಗಳನ್ನು ದಾಟಿಸುವ ಮೊದಲು ರಸ್ತೆಗೆ ಬಂದ ತಾಯಿ ಆನೆ, ಮರಿಗಳು ರಸ್ತೆ ದಾಟುವಾಗ ಯಾವುದೇ ರೀತಿಯ ಅವಘಡ ಸಂಭವಿಸದಂತೆ ರಸ್ತೆಯಲ್ಲಿ ವಾಹನ ಸಂಚಾರವನ್ನು ತಡೆದಿದೆ.

ಆನೆಯನ್ನು ಕಂಡ ವಾಹನ ಚಾಲಕರು ತಮ್ಮ ವಾಹನವನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದಾರೆ, ಆದರೆ ಸೈಕಲ್‌ ಸವಾರನೊಬ್ಬ ಮಾತ್ರ ಆನೆಯ ಎಚ್ಚರಿಕೆ ಲೆಕ್ಕಿಸದೆ ರಸ್ತೆಯಲ್ಲಿ ಸಂಚರಿಸಿದ್ದಾನೆ. ಇದರಿಂದ ಕೋಪಗೊಂಡ ಆನೆ ಆತನನ್ನು ಸ್ವಲ್ಪ ದೂರದ ವರೆಗೆ ಅಟ್ಟಿಸಿಕೊಂಡು ಓಡಿದೆ. ಸೈಕಲ್ ಸವಾರನ ನಸೀಬು ಚೆನ್ನಾಗಿತ್ತು, ಆನೆಯ ದಾಳಿಯಿಂದ ಬಚಾವ್ ಆಗಿದ್ದಾನೆ.

ಇದನ್ನು ನೋಡಿದ ಇತರ ವಾಹನ ಚಾಲಕರು ವಾಹನ ಚಲಾಯಿಸುವ ಧೈರ್ಯ ತೋರಿಲ್ಲ. ಇನ್ನು ಯಾವ ಅಪಾಯವಿಲ್ಲ‌ ಎಂದು ಖಚಿತಪಡಿಸಿಕೊಂಡ ಆನೆ ಕೊನೆಗೆ ತನ್ನ ಮಕ್ಕಳನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಇಲ್ಲಿದೆ ನೋಡಿ.

Watch Video

error: Content is protected !!