fbpx

ಏಕಾಏಕಿ ಬಿಜೆಪಿ ನಾಯಕನ ಮೇಲೆ ದಾಳಿ ಮಾಡಿ, ಗುಂ’ಡಿಟ್ಟು ಬರ್ಬರವಾಗಿ ಹ’ತ್ಯೆಗೈದ ಇ’ಸ್ಲಾಮಿಕ್ ಉ’ಗ್ರರು (ವಿಡಿಯೋ)

ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಇಸ್ಲಾಮಿಕ್ ಉಗ್ರರ ಅಟ್ಟಹಾಸ ಮತ್ತೆ ಮುಂದುವರೆದಿದೆ. ಅಮಾಯಕರನ್ನೇ ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಮತ್ತೆ ತಮ್ಮ ಷಂ’ಡತನ ಮೆರೆದಿದ್ದಾರೆ. ಕುಲ್ಗಾಮ್ ಜಿಲ್ಲೆಯಲ್ಲಿ ಇಂದು ಮುಂಜಾನೆ ಬಿಜೆಪಿ ನಾಯಕನ ಮನೆ ಮೇಲೆ ದಾಳಿ ನಡೆಸಿದ ಉಗ್ರರು ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.

ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಅಷ್ಟೇ ಅಲ್ಲದೆ ಜಿಲ್ಲೆಯ ಖಾಜಿಗುಂದ್ ಗ್ರಾಮದ ಸರ್ಪಂಚ್ ಆಗಿದ್ದ ಸಾಜದ್ ಅಹ್ಮದ್ ಖಂಡೇ ಅವರೇ ಉಗ್ರರ ಗುಂಡೇಟಿಗೆ ಬಲಿಯಾದ ನಾಯಕ. ಗುರುವಾರ ಬೆಳಗ್ಗೆ ಸಾಜದ್ ಮನೆಯ ಬಳಿ ಪ್ರತ್ಯೇಕತಾವಾದಿ ಇಸ್ಲಾಮಿಕ್ ಉಗ್ರರು ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡ ಅವರನ್ನು ಅನಂತ್‌ನಾಗ್ ಜಿಲ್ಲೆಯ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅಸುನೀಗಿದ್ದಾರೆ.

ಕಳೆದ ಎರಡು ದಿನಗಳಲ್ಲಿ ಕುಲ್ಗಾಮ್ ಜಿಲ್ಲೆಯಲ್ಲಿ ಬಿಜೆಪಿ ನಾಯಕರ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದಾಗಿದ್ದು, ಬುಧವಾರವಷ್ಟೇ ಬಿಜೆಪಿ ಬೆಂಬಲಿತ ಸರ್ಪಂಚ್ ಆರೀಫ್ ಅಹ್ಮದ್ ಖಾನ್ ಅವರ ಮೇಲೆ ಉಗ್ರರು ದಾಳಿ ನಡೆಸಿದ್ದು, ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Watch Video

error: Content is protected !!