ಅಯೋಧ್ಯೆ ಪ್ರಭು ಶ್ರೀರಾಮನ ಮಂದಿರ ನಿರ್ಮಾಣದ ಭೂಮಿಪೂಜೆ ಆಗಸ್ಟ್ 5ರಂದು ಭರ್ಜರಿಯಾಗಿ ನೆರವೇರಿದೆ. ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲಿ ಬುಧವಾರ ಕಾರ್ಯಕ್ರಮ ನಡೆದಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ, ಆರೆಸ್ಸೆಸ್, ವಿಎಚ್ಪಿ ನಾಯಕರು, ಸಾಧುಸಂತರು ಹಾಗೂ ಗಣ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಕೋಟ್ಯಾಂತರ ಹಿಂದೂಗಳು ದೃಶ್ಯಮಾಧ್ಯಮಗಳ ಮೂಲಕ ಭೂಮಿಪೂಜನೆ ಕಾರ್ಯಕ್ರಮ ವೀಕ್ಷಿಸಿ ಪ್ರಭು ಶ್ರೀರಾಮನ ಆಶೀರ್ವಾದ ಪಡೆದರು.
ಅಯೋಧ್ಯೆ ಭೂಮಿಪೂಜೆಯ ಪ್ರಯುಕ್ತ ಸಚಿನ್ ಸಾಂಗ್ಲಿ ಅವರು ರಚಿಸಿದ ಮಿನಿಯೇಚರ್ ಕಲಾಕೃತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿ ಮೋದಿಯವರು ಅಯೋಧ್ಯೆ ಅಧಿಪತಿ ಪ್ರಭು ಶ್ರೀರಾಮನಿಂದ ಆಶೀರ್ವಾದ ಪಡೆಯುತ್ತಿರುವ ರೀತಿ ಈ ಕಲಾಕೃತಿ ರಚಿಸಲಾಗಿದೆ.
ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಸಚಿನ್ ಸಾಂಗ್ಲಿ ಅವರು ಚಾಕ್ಪೀಸ್ನಲ್ಲಿ ಈ ಕಲಾಕೃತಿಯನ್ನು ಮಾಡಿದ್ದಾರೆ. ಇದುವರೆಗೆ ಇಂತಹ ನೂರಕ್ಕೂ ಹೆಚ್ಚು ಕಲಾಕೃತಿಗಳನ್ನು ಇವರು ರಚಿಸಿದ್ದು, ರಜನಿಕಾಂತ್, ಅಮಿತಾಭ್ ಬಚ್ಚನ್, ಅಂಬರೀಶ್ ಸೇರಿದಂತೆ ಅನೇಕ ಗಣ್ಯರನ್ನು ಚಾಕ್ಪೀಸ್ನಲ್ಲಿ ಕೆತ್ತನೆಮಾಡಿದ್ದಾರೆ. ಪ್ರಭು ಶ್ರೀರಾಮ ಪ್ರಧಾನಿ ಮೋದಿಯವರಿಗೆ ಆಶೀರ್ವಾದ ಮಾಡುವ ಕೆತ್ತನೆಯ ವಿಡಿಯೋ ಇಲ್ಲಿದೆ ನೋಡಿ,