fbpx

Please assign a menu to the primary menu location under menu

ಅಯೋಧ್ಯೆಯಂತೆ, ಕಾಶಿ ಮಥುರಾಗಳಲ್ಲೂ ಅಕ್ರಮ ಮಸೀದಿಗಳನ್ನು ಉರುಳಿಸಿ ಮಂದಿರ ಕಟ್ಟಬೇಕು ಎಂದ ಕೆ ಎಸ್ ಈಶ್ವರಪ್ಪ! ವೈರಲ್ ವಿಡಿಯೋ ನೋಡಿ

ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಭರ್ಜರಿಯಾಗಿ ನಡೆಯುತ್ತಿದೆ. ಭಾರತದ ಹೆಮ್ಮೆಯ ಪ್ರಧಾನಿ ಶ್ರೀ ನರೆಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆದಿದ್ದು, ಭಾರತದ ಕೋಟ್ಯಾಂತರ ರಾಮಭಕ್ತ ಹಿಂದೂ ಬಾಂಧವರು ದೃಶ್ಯಮಾಧ್ಯಮಗಳ ಮೂಲಕ ಕಣ್ತುಂಬಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೆ ಎಸ್ ಈಶ್ವರಪ್ಪನವರು, ಅಯೋಧ್ಯೆಯಂತೆ ಕಾಶಿ, ಮಥುರಾಗಳಲ್ಲೂ ದೇವಾಲಯಗಳ ಮೇಲೆ ಕಟ್ಟಲಾಗಿರುವ ಅಕ್ರಮ ಇಸ್ಲಾಮಿಕ್ ಕಟ್ಟಡಗಳನ್ನು ನೆಲಕ್ಕೆ ಕೆಡವಿ ಮತ್ತೆ ಹಿಂದೂ ದೇವಾಲಯಗಳನ್ನು ಕಟ್ಟಬೇಕಾಗಿದೆ ಎಂದಿದ್ದಾರೆ.

ಕಾಶಿ, ಮಥುರಾಗಳಲ್ಲಿ ದೇವಾಲಯದ ಮೇಲೆ ಕಟ್ಟಲಾಗಿರುವ ಅಕ್ರಮ ಇಸ್ಲಾಮಿಕ್ ಕಟ್ಟಡಗಳು ಗುಲಾಮಗಿರಿಯ ಸಂಕೇತವಾಗಿದೆ. ಈ ಕಾರಣಕ್ಕೆ ಅದನ್ನ ಕೆಡವಿ ಮರಳಿ ಹಿಂದೂ ದೇವಾಲಯ ಕಟ್ಟುವ ಅನಿವಾರ್ಯತೆ ಇದೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ಪಡೆದಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

error: Content is protected !!