fbpx

ತನ್ನ ಕೊಲ್ಲಲು ಯತ್ನಿಸಿದವರ ನೆಲಕ್ಕೆ ಕೆಡವಿ ಹಣ್ಣುಗಾಯಿ ನೀರುಗಾಯಿ ಮಾಡಿದ ನಂದಿ, ವೈರಲ್ ವಿಡಿಯೋ ನೋಡಿ

ನಂದಿಯು ಶಿವನ ವಾಹನ, ಅವನ ಗಣರಲ್ಲಿ ಪ್ರಧಾನ ಗಣ. ಈ ಎಲ್ಲಾ ಕಾರಣಗಳಿಂದ ನಂದಿಯನ್ನು ಹಿಂದೂಗಳು ವಿಶೇಷವಾಗಿ ಪೂಜಿಸುತ್ತಾರೆ. ಪ್ರತಿ ಶಿವ ದೇವಾಲಯದಲ್ಲಿ ಶಿವ ವಿಗ್ರಹದ ಮುಂದೆ ನಂದಿ ವಿಗ್ರಹವೂ ಇದ್ದೇ ಇರುತ್ತೆ.

ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಬಕ್ರೀದ್ ಸಂದರ್ಭದಲ್ಲಿ ಕಟುಕರು ನಂದಿಯನ್ನು ಕೊಂದು ತಿನ್ನಲು ಯತ್ನಿಸಿದ್ದಾರೆ. ವ್ಯಕ್ತಿಯೋರ್ವ ನಂದಿಯನ್ನು ಹಿಡಿಯಲು‌ ಹೋಗಿ, ಅದು ಕೈಗೆ ಸಿಗದಿದ್ದಾಗ ಅದರ ಮೇಲೆ ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ಸ್ವಲ್ಪ ಹೊತ್ತು ಅತ್ತಿತ್ತ ಓಡಿದ ನಂದಿ ಕೊನೆಗೆ ಆತನನ್ನು ನೆಲಕ್ಕೆ ಕೆಡವಿ ಕಾಲಿನಿಂದ ತುಳಿದು ಹಾಕಿದೆ.

ಈ ಸಂದರ್ಭದಲ್ಲಿ ಅಲ್ಲೇ ಇದ್ದ ಕೆಲವರು ಆ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ್ದು, ನಂದಿ ಅವರ ಮೇಲು ದಾಳಿ ನಡೆಸಿ ಗೇಟ್‌ನಿಂದ ಹೊರಕ್ಕೆ ಬಂದಿದೆ. ರಸ್ತೆಯಲ್ಲಿ ನಿಂತಿದ್ದ ಓರ್ವ ಓಡುತ್ತಿರುವ ನಂದಿಯನ್ನು ತಡೆಯಲು ಯತ್ನಿಸಿದ್ದು, ಆತನನ್ನು ನೆಲಕ್ಕೆ ಕೆಡವಿದ ನಂದಿ ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಿದೆ.

ಕಂಬಳ, ಜಲ್ಲಿಕಟ್ಟು ಸಂದರ್ಭದಲ್ಲಿ ಪ್ರಾಣಿಹಿಂಸೆ ಎಂದು ಬಾಯಿಬಡಿದುಕೊಳ್ಳುವ ಪೇಟಾದ ನಾಲಾಯಕರಿಗೆ ಬಾಕಿ ಸಮಯದಲ್ಲಿ ಪ್ರಾಣಿಗಳ ಕೂಗು ಕೇಳಿಸೋದಿಲ್ಲ. ಬಕ್ರೀದ್ ಸಂದರ್ಭದಲ್ಲಿ ಲಕ್ಷಾಂತರ ಕುರಿ, ಹಸು, ಒಂಟೆಗಳನ್ನು ಬಲಿಕೊಟ್ಟರು ವಿರೋಧಿಸುವುದಿಲ್ಲ.

ತನ್ನನ್ನು ಕೊಲ್ಲಲು ಯತ್ನಿಸಿದವರನ್ನು ನಂದಿ ಯಾವರೀತಿ ಹಣ್ಣುಗಾಯಿ ನೀರುಗಾಯಿ ಮಾಡಿದೆ, ಈ ವೈರಲ್ ವಿಡಿಯೋ ನೋಡಿ

Watch Video

error: Content is protected !!