ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೆ ಭಾರತದಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೂ ಅನೇಕರು ಸಂಚಾರಿ ಕಾನೂನುಗಳನ್ನು ಉಲ್ಲಂಘಿಸಿ, ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಾರೆ.
ಭಾರತದಲ್ಲಿ ನಡೆಯುವ ರಸ್ತೆ ಅಪಘಾತಗಳಲ್ಲಿ ಶೇಕಡಾ 30ರಷ್ಟು ರಸ್ತೆ ಅಪಘಾತಗಳು ದ್ವಿಚಕ್ರ ವಾಹನಗಳಿಗೆ ಸಂಭವಿಸಿದ್ದು. ಇದರಲ್ಲಿ ಶೇಕಡಾ 28ರಷ್ಟು ಮಂದಿ ಹೆಲ್ಮೆಟ್ ರಹಿತ ಪ್ರಯಾಣದಿಂದಾಗಿ ಸಾವಿಗೀಡಾಗುತ್ತಾರೆ. ಇದೇ ಕಾರಣಕ್ಕೆ ಭಾರತದಲ್ಲಿ ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರೋದು.
ಮುಂಬೈ ಪೋಲೀಸರು ಹೆಲ್ಮೆಟ್ ಕುರಿತಾಗಿ ಜಾಗೃತಿ ಮೂಡಿಸುವ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು ತುಂಬಾ ವೈರಲ್ ಆಗಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ವೇಗವಾಗಿ ಬಂದ ಬೈಕ್ ಸವಾರನೊಬ್ಬನಿಗೆ ಕಾರು ಡಿಕ್ಕಿ ಹೊಡೆಯೋದನ್ನ ಕಾಣಬಹುದಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಸ್ವಲ್ಪದೂರ ಹೋಗಿ ಬಿದ್ದಿದ್ದಾನೆ. ಹೇಗೋ ಸಾವರಿಸಿಕೊಂಡು ಎದ್ದು ನಿಲ್ಲಬೇಕು ಎನ್ನುವಷ್ಟರಲ್ಲೇ ಅಲ್ಲೇ ಇದ್ದ ಲೈಟ್ ಕಂಬ ಆತನ ತಲೆಗೆ ಬಡಿದಿದೆ. ಅದೃಷ್ಟವಶಾತ್ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದ, ಹೀಗಾಗಿ ಪ್ರಾಣಾಪಾಯ ಸಂಭವಿಸಿಲ್ಲ.
ಕಂಬ ಬಿದ್ದ ಮೇಲು ಸವಾರ ಮತ್ತೆ ಎದ್ದು ನಿಂತಿದ್ದಾನೆ, ಹೆಲ್ಮೆಟ್ ಆತನ ಜೀವ ಕಾಪಾಡಿದೆ. ಇದೀಗ ಮುಂಬೈ ಪೋಲೀಸರು ಶೇರ್ ಮಾಡಿದ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಎಷ್ಟು ಅತ್ಯವಶ್ಯಕ ಎಂದು ಕಾಣಬಹುದು. ವೈರಲ್ ವೀಡಿಯೋ ಇಲ್ಲಿದೆ ನೋಡಿ,
Watch Video
Helmet is bae!!!! pic.twitter.com/JtfegwgsMW
— Mumbai Police (@MumbaiPolice) February 23, 2019