fbpx

ಭೀಕರ ಬಾಂಬ್ ಸ್ಫೋಟಕ್ಕೆ ಇಡೀ ನಗರವೇ ಧ್ವಂಸ, ಸಿಸಿಟಿವಿಯಲ್ಲಿ ಸೆರೆಯಾಯಿತು ಬೆಚ್ಚಿಬೀಳಿಸುವ ದೃಶ್ಯ (ವೀಡಿಯೋ)

ಲೆಬನಾನ್‌ನ ಬೈರುತ್ ನಗರದಲ್ಲಿ ಸಂಭವಿಸಿದ ಭೀಕರ ಬಾಂಬ್ ಸ್ಫೋಟಕ್ಕೆ ಇಡೀ ನಗರವೇ ನಲುಗಿ ಹೋಗಿದೆ. ಬೈರುತ್ ನಗರದ ಬಂದರು ಪ್ರದೇಶದಲ್ಲಿ ಭೀಕರ ಸ್ಫೋಟ ಇಡೀ ನಗರವನ್ನು ನಡುಗಿಸಿದ್ದು, ಹತ್ತಾರು ಜನ ಸಾವಿಗೀಡಾಗಿದ್ದಾರೆ.

ಯುದ್ಧಗ್ರಸ್ತ ಲೆಬನಾನ್‌ನ ಹಲವು ಕಡೆ ಕೆಲ ದಿನಗಳಿಂದ ಗುಂಡಿನ ದಾಳಿಗಳು ನಡೆಯುತ್ತಿದ್ದವು, ಆದರೆ ಇದೀಗ ಭೀಕರ ಸ್ಫೋಟಕ್ಕೆ ಇಡೀ ಬೈರುತ್ ನಗರ ಬೆಚ್ಚಿಬಿದ್ದಿದೆ. ಇದುವರೆಗೆ 80ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಗಾಯಾಳುಗಳಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕೆಲವೇ ಗಂಟೆಗಳ ಅಂತರದಲ್ಲಿ ಎರಡು ಕಡೆ ಸ್ಫೋಟಗಳು ಸಂಭವಿಸಿದ್ದು, ಮೊದಲ ಸ್ಫೋಟ ತೀವ್ರತೆ ಅಷ್ಟೇನು ಇರಲಿಲ್ಲ ಎನ್ನಲಾಗುತ್ತಿದೆ. ಆದರೆ ಎರಡನೇ ಸ್ಫೋಟ ಬಂದರು ಪ್ರದೇಶದಲ್ಲಿ ಸಂಭವಿಸಿದ್ದು, ಹಡಗಿನಲ್ಲಿ ಸ್ಪೋಟಕ ಸಾಮಾಗ್ರಿ ತುಂಬಿ ಸ್ಫೋಟ ನಡೆಸಿರುವ ಸಾಧ್ಯತೆ ದಟ್ಟವಾಗಿದೆ.

ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಗಳು ಹೊತ್ತುಕೊಂಡಿಲ್ಲ, ಹೀಗಾಗಿ ಸ್ಫೋಟಕ್ಕೆ ಕಾರಣ ಯಾರು ಎಂದು ತಿಳಿದುಬಂದಿಲ್ಲ. ಭೀಕರ ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗಿದ್ದು, ಬೆಚ್ಚಿಬೀಳಿಸುವಂತಿದೆ. ವೈರಲ್ ವಿಡಿಯೋ ಇಲ್ಲಿದೆ ನೋಡಿ,

Watch Video

Update

ಈ ಭಯಾನಕ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಕಾರಣ ಎಂದು ತಿಳಿದುಬಂದಿದೆ. ಬಂದರು ಸಮೀಪದ ಸಂಗ್ರಹಾಗಾರದಲ್ಲಿ ಭಾರೀ ಪ್ರಮಾಣದಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಲಾಗಿತ್ತು, ಕಳೆದ ಆರು ವರ್ಷಗಳಿಂದ ಅದು ಅಲ್ಲೇ ಇತ್ತು ಎಂದು ಹೇಳಲಾಗುತ್ತಿದೆ.

ಇದು ಶಾರ್ಟ್‌ಸರ್ಕ್ಯೂಟ್ ನಿಂದಲೋ ಅಥವಾ ಕೆಮಿಕಲ್ ರಿಯಾಕ್ಷನ್‌ನಿಂದಲೋ ಸ್ಪೋಟಗೊಂಡಿದೆ. ಈಗಾಗಲೇ ಸಾವಿನ ಪ್ರಮಾಣ ನೂರರ ಗಡಿ ದಾಟಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ. ಇನ್ನೂ ಅನೇಕರು ನಾಪತ್ತೆಯಾಗಿದ್ದು ಸಾವಿನ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ದುರ್ಘಟನೆಯಿಂದ 2ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದಾರೆ

error: Content is protected !!