fbpx

ಕಾಂಗರು ಜೊತೆ ಬಾಕ್ಸಿಂಗ್ ಮಾಡಿ ತನ್ನ ಸಾಕು ನಾಯಿಯನ್ನು ಕಾಪಾಡಿದ ವ್ಯಕ್ತಿ, ವಿಡಿಯೋ ಸಖತ್ ವೈರಲ್

ಕಾಂಗರು ಜೊತೆ ಬಾಕ್ಸಿಂಗ್ ಮಾಡೋಕೆ ಗುಂಡಿಗೆ ಗಟ್ಟಿ ಬೇಕು. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಾಕುನಾಯಿಯನ್ನು ಕಾಂಗರುವಿನಿಂದ ರಕ್ಷಿಸಲು ಕಾಂಗರುವಿನ ಜೊತೆಯೆ ಬಾಕ್ಸಿಂಗ್ ಮಾಡಿದ್ದಾನೆ.

ಕಾಡಿನಲ್ಲಿ ವಿಹರಿಸುವ ಸಂದರ್ಭದಲ್ಲಿ ಕಾಂಗರು ಸಾಕುನಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದೆ. ತನ್ನ ನಾಯಿಯನ್ನು ಹುಡುಕಿಕೊಂಡು ಬಂದ ಮಾಲೀಕ ಇದನ್ನು ಕಂಡಿದ್ದಾನೆ. ತಕ್ಷಣ ಗಾಡಿಯಿಂದ ಇಳಿದು ಕಾಂಗರು ಬಳಿ ಓಡಿ ಹೋಗಿದ್ದಾನೆ. ವ್ಯಕ್ತಿ ತನ್ನ ಬಳಿ ಓಡಿಬರುತ್ತಿರೋದನ್ನ ಗಮನಿಸಿದ ಕಾಂಗರು ನಾಯಿಯನ್ನು ಮತ್ತಷ್ಟು ಬಿಗಿಯಾಗಿ ಹಿಡಿದುಕೊಂಡಿದೆ.

ಕಾಂಗರು ಬಳಿ ಹೋದ ವ್ಯಕ್ತಿ ಮೊದಲು ನಾಯಿಯನ್ನು ಕಾಂಗರುವಿನಿಂದ ಬಿಡಿಸಿ, ಬಾಕ್ಸಿಂಗ್ ಮೂಲಕ ಕಾಂಗರುವಿನ ಮುಖಕ್ಕೆ ಒಂದು ಪಂಚ್ ಕೊಟ್ಟಿದ್ದಾನೆ. ಬಾಕ್ಸಿಂಗ್ ಫೈಟ್ ಗೆ ಹೆಸರುವಾಸಿಯಾದ ಕಾಂಗರುವಿಗೆ ಇದರಿಂದ ಮುಜುಗರವಾಯಿತೋ ಏನೋ ತಕ್ಷಣ ಅಲ್ಲಿಂದ ಕಾಲ್ಕಿತ್ತಿದೆ.

ಇದನ್ನೂ ಓದಿ:  ಸುಂದರ ಯುವಕ ಏಲಿಯನ್ ಆಗಿ ಬದಲಾಗಿದ್ದು ಹೇಗೆ ಗೊತ್ತೇ? ವೈರಲ್ ವಿಡಿಯೋ ನೋಡಿ

ಈ ವೀಡಿಯೋವನ್ನು ‘ವೈರಲ್ ಹಾಗ್’ ಯೂಟ್ಯೂಬ್ ಚಾನಲ್ ಅಪ್ಲೋಡ್ ಮಾಡಿದ್ದು, 7ಕೋಟಿ ವೀಕ್ಷಣೆ ಪಡೆದಿದೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

Trending Short Videos

error: Content is protected !!