fbpx

ಬೆಕ್ಕನ್ನು ನೀರಿಗೆ ಎಸೆಯಲು ಹೋದ ಮಗು, ಬೆಕ್ಕು ಯಾವ ರೀತಿ ಸೇಡು ತೀರಿಸಿಕೊಂಡಿದೆ ನೋಡಿ (ವೈರಲ್ ವೀಡಿಯೋ)

ಪುಟ್ಟ ಮಗುವೊಂದು ಬೆಕ್ಕನ್ನು ನೀರಿಗೆ ಎಸೆಯಲು ಹೋಗಿ ತಾನೇ ನೀರಿಗೆ ಬಿದ್ದಿದೆ. ಬೆಕ್ಕಿನ ಜೊತೆ ಆಟವಾಡುತ್ತಿದ್ದ ಮಗು ಬೆಕ್ಕನ್ನ ಎತ್ತಿಕೊಂಡು ಈಜುಕೊಳದ ಬಳಿ ಬಂದಿದೆ.

ಕೈಯಲ್ಲಿದ್ದ ಬೆಕ್ಕನ್ನು ಇನ್ನೇನು ನೀರಿಗೆ ಎಸೆಯಬೇಕು, ಬೆಕ್ಕು ಮಗುವಿನ ಬಟ್ಟೆಯನ್ನೇ ಎಳೆದು ನೀರಿಗೆ ದೂಡಿ ಓಡಿ ಹೋಗಿದೆ. ಅಲ್ಲಿದ್ದವರು ತಕ್ಷಣ ನೀರಿಗೆ ಬಿದ್ದ ಮಗುವನ್ನು ರಕ್ಷಿಸಿದ್ದಾರೆ.

ಈ ವೀಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ‌. ‘ಮಕ್ಕಳಿರಲಿ ದೊಡ್ಡವರಿರಲಿ, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!