fbpx

ಟ್ರೆಕ್ಕಿಂಗ್ ಹೋಗಿದ್ದ ಬಾಲಕನನ್ನು ಹಿಂಬಾಲಿಸಿಕೊಂಡು ಬಂದ ದೈತ್ಯ ಕರಡಿ! ಮುಂದೇನಾಯಿತು ನೋಡಿ (ವೈರಲ್ ವಿಡಿಯೋ)

ಟ್ರೆಕ್ಕಿಂಗ್ ಮಾಡೋಕೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಪ್ರಕೃತಿ ಸೌಂದರ್ಯ ಸವಿಯುತ್ತಾ ಬೆಟ್ಟಗುಡ್ಡಗಳನ್ನು ಹತ್ತುವುದರಲ್ಲಿ ಸಿಗೋ ಸಂತೋಷ ಬೇರೆಲ್ಲಿ ಸಿಗುತ್ತೆ.

ಆದರೆ ಕೆಲವೊಮ್ಮೆ ಇದೇ ಟ್ರೆಕ್ಕಿಂಗ್ ಪ್ರಾಣಕ್ಕೆ ಕಂಟಕವಾಗಲೂ ಬಹುದು. ದಟ್ಟ ಅರಣ್ಯಗಳ ಮಧ್ಯೆ ಪರ್ವತಾರೋಹಣ ಮಾಡುವವರು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಯಾವಾಗ ಕಾಡುಪ್ರಾಣಿಗಳಿಂದ ಅಪಾಯ ಎದುರಾಗಬಹುದು ಎಂಬುದನ್ನು ಊಹಿಸಲು ಅಸಾಧ್ಯ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈ ವೀಡಿಯೋದಲ್ಲಿರುವ ಬಾಲಕನಿಗೂ ಆಗಿರೋದು ಅದೇ. ಬಾಲಕ ತನ್ನ ಸಂಬಂಧಿಕರ ಜೊತೆ ಪರ್ವತಾರೋಹಣ ಮಾಡಲು ತೆರಳಿದ್ದು, ಹಿಂದಿರುಗುವ ಸಂದರ್ಭ ದೈತ್ಯ ಕರಡಿಯೊಂದು ಆತನನ್ನು ಹಿಂಬಾಲಿಸಿದೆ‌.

ಬೇರೆ ಮಕ್ಕಳಾದರೆ ಹೆದರಿಕೆಯಿಂದ ಕಿರುಚುತ್ತಿದ್ದರೋ ಏನೋ, ಈ ಹನ್ನೆರಡು ವರ್ಷದ ಬಾಲಕ ಮಾತ್ರ ಯಾವುದೇ ರೀತಿಯಲ್ಲಿ ಭಯವನ್ನು ವ್ಯಕ್ತಪಡಿಸದೆ ಮೆಲ್ಲನೆ ಬೆಟ್ಟ ಇಳಿದು ಬಂದಿದ್ದಾನೆ. ಕರಡಿಯೂ ಸ್ವಲ್ಪ ದಾರಿಯವರೆಗೆ ಬಾಲಕನನ್ನು ಹಿಂಬಾಲಿಸಿದೆ.

ಬಾಲಕನ ಅದೃಷ್ಟ ಚೆನ್ನಾಗಿತ್ತು ಕರಡಿ ಬಾಲಕನಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಟ್ಟಿಲ್ಲ. ಬಾಲಕ ಒಂದು ವೇಳೆ ಕಿರುಚೋದು ಅಥವಾ ಓಡೋದು ಮಾಡಿದ್ದರೆ ಕರಡಿ ಬಾಲಕನ ಮೇಲೆ ದಾಳಿ ಮಾಡುತ್ತಿತ್ತೇನೋ. ಬಾಲಕನ ಸಮಯಪ್ರಜ್ಞೆ ಆತನ ಪ್ರಾಣ ಉಳಿಸಿದೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!