fbpx

Please assign a menu to the primary menu location under menu

ಕನ್ನಡಿಯಲ್ಲಿ ತನ್ನ ಪ್ರತಿಬಿಂಬ ಕಂಡ ಚಿರತೆ ಮಾಡಿದ್ದೇನು ನೋಡಿ (ವೈರಲ್ ವಿಡಿಯೋ)

ಚಿರತೆಗಳು ಬೇಟೆಯಾಡುವುದರಲ್ಲಿ ನಿಪುಣತೆ ಹೊಂದಿರುವ ಪ್ರಾಣಿಗಳು. ಒಮ್ಮೆ ಒಂದು ಬೇಟೆಯ ಮೇಲೆ ಕಣ್ಣಿಟ್ಟರೆ ಅದನ್ನು ಕೊಂದು ತಿನ್ನುವವರೆಗೆ ಅವು ಸುಮ್ಮನೆ ಕೂರಲ್ಲ. ಇಷ್ಟೇ ಅಲ್ಲದೆ ತನ್ನ ಬೇಟೆಯ ವ್ಯಾಪ್ತಿಗೆ ಬೇರೆ ಪ್ರಾಣಿಗಳು ಬಂದರೆ ಅದನ್ನೂ ಅಲ್ಲಿಂದ ಓಡುವಂತೆ ಮಾಡುತ್ತವೆ.

ಇಂತಹ ಚಿರತೆ ತನ್ನ ಪ್ರತಿಬಿಂಬವನ್ನು ಕನ್ನಡಿಯಲ್ಲಿ ನೋಡಿದಾಗ ಹೇಗೆ ವರ್ತಿಸಿದೆ ನೋಡಿ. ಕಾಡಿನ ಮಧ್ಯೆ ಅಳವಡಿಸಿದ್ದ ದೊಡ್ಡ ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ನೋಡಿದ ಚಿರತೆ ಯಾವುದೋ ಬೇರೆ ಚಿರತೆ ತನ್ನ ಬೇಟೆಯ ವ್ಯಾಪ್ತಿಗೆ ಆಗಮಿಸಿದೆ ಎಂದು ತಿಳಿದು ಅದರ ಮೇಲೆ ದಾಳಿಗೆ ಮುಂದಾಗುತ್ತದೆ.

ಎಷ್ಟೇ ಗರ್ಜಿಸಿದರು, ದಾಳಿ ಮಾಡಿದರೂ ಅದಕ್ಕೆ ಕಾಣುತ್ತಿದ್ದದ್ದು ಅದರದೇ ಪ್ರತಿಬಿಂಬ. ಕನ್ನಡಿಯ ಹಿಂಬಾಗ ಹೋಗಿ ನೋಡಿದ್ರೆ ಅಲ್ಲಿ ಯಾವುದೇ ಚಿರತೆ ಇಲ್ಲ, ಹೀಗೆ ಚಿರತೆ ಫುಲ್ ಕನ್ಪ್ಯೂಸ್ ಆಗಿಬಿಟ್ಟಿದೆ. ಈ ವೀಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ. ವೈರಲ್ ವಿಡಿಯೋ ನೋಡಿ,

Watch Video

error: Content is protected !!