fbpx

ಮನುಷ್ಯ ತೇಲಿಬಿಟ್ಟ ಪ್ಲಾಸ್ಟಿಕ್ ಕಸಗಳನ್ನು ನದಿಯಿಂದ ಸ್ವಚ್ಚಗೊಳಿಸುತ್ತಿರುವ ಬಾತುಕೋಳಿ, ವಿಡಿಯೋ ಸಖತ್ ವೈರಲ್

ಈ ಭೂಮಿಯಲ್ಲಿರುವ ಪ್ರಾಣಿಸಂಕುಲದಲ್ಲಿ ಮನುಷ್ಯನಷ್ಟು ಕೆಟ್ಟ ಜೀವಿ ಬೇರೊಂದಿಲ್ಲ. ತನ್ನ ಸ್ವಾರ್ಥ ಸಾಧನೆಗಾಗಿ ತನಗೆ ಬದುಕುಕೊಟ್ಟ ಪ್ರಕೃತಿಯನ್ನೇ ನಾಶಮಾಡುತ್ತಿದ್ದಾನೆ.

ಜೀವಿಗಳಿಗೆ ಬದುಕಲು ಅಗತ್ಯವಾಗಿ ಬೇಕಾಗಿರುವ ಗಾಳಿ, ನೀರು ಎಲ್ಲವನ್ನೂ ಕಲುಷಿತಗೊಳಿಸಿದ್ದಾನೆ. ಮನುಷ್ಯ ಮಾಡಿದ ಕರ್ಮದ ಫಲ ಇತರ ಜೀವಿಗಳೂ ಅನುಭವಿಸಬೇಕಾಗಿ ಬಂದಿದೆ. ಅದೆಷ್ಟೋ ಪ್ರಾಣಿಪಕ್ಷಿಗಳು, ಜಲಚರ ಜೀವಿಗಳು ವಿಷಗಾಳಿ, ಕಲುಷಿತ ನೀರಿನಿಂದಾಗಿ ಪ್ರತಿದಿನ ಸಾಯುತ್ತಿವೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಈ ವಿಡಿಯೋವನ್ನೆ ನೋಡಿ, ಮನುಷ್ಯ ಹರಿಬಿಟ್ಟ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಾತುಕೋಳಿಯೊಂದು ಸ್ವಚ್ಚಗೊಳಿಸುತ್ತಿದೆ. ತನ್ನ ಮರಿಗಳಿಗೆ ನದಿಯಲ್ಲಿ ಸ್ವಚ್ಚಂದವಾಗಿ ಈಜಾಡಲು ಅಡಚಣೆ ಉಂಟು ಮಾಡುತ್ತಿದ್ದ ಕಸಗಳನ್ನು ಬಾತುಕೋಳಿ ತನ್ನ ಕೊಕ್ಕಿನ ಮೂಲಕ ನೀರಿನಿಂದ ಮೇಲಕ್ಕೆ ಹಾಕುತ್ತಿದೆ.

ಕರೋನಾ ಎಂಬ ಮಹಾಮಾರಿ ಮನುಷ್ಯನಿಗೆ ತಟ್ಟಿದ್ದೂ ಪ್ರಾಣಿಪಕ್ಷಿಗಳ ಶಾಪದಿಂದಲೇ ಇರಬಹುದು. ಕರೋನಾ ಲಾಕ್‌ಡೌನ್ ಸಮಯದಲ್ಲಿ ಕಂಪನಿಗಳು ಮುಚ್ಚಿದ ಪರಿಣಾಮ ಅನೇಕ ಕಲುಷಿತ ನದಿಗಳು ಸ್ವಚ್ಚವಾಗಿದೆ, ವಿಷಗಾಳಿಯ ಪ್ರಮಾಣ ಕಡಿಮೆಯಾಗಿದೆ.

ಮನುಷ್ಯ ಇನ್ನಾದರೂ ಬುದ್ಧಿಕಲಿತರೆ ತಾನು ಬದುಕುವ ಜೊತೆಗೆ ಉಳಿದ ಪ್ರಾಣಿಸಂಕುಲಗಳು ಇನ್ನಷ್ಟು ವರ್ಷ ಈ ಭೂಮಿಯ ಮೇಲೆ ಬದುಕಲು ಅವಕಾಶ ಸಿಗುತ್ತೆ. ಬಾತುಕೋಳಿ ನದಿನೀರನ್ನು ಸ್ವಚ್ಚಮಾಡುತ್ತಿರುವ ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!