fbpx

ಹುಲಿಯನ್ನು ಮೀರಿಸುವಂತೆ ಬೇಟೆಯಾಡಿದ ಬೆಕ್ಕು, ವೀಡಿಯೋ ಸಖತ್ ವೈರಲ್

ಬೆಕ್ಕೊಂದು ಹೊಂಚು ಹಾಕಿ ಹಕ್ಕಿಯನ್ನು ಬೇಟಿಯಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹುಲಿ, ಚಿರತೆಗಳಿಗಿಂತ ತಾನೇನು ಕಮ್ಮಿ ಇಲ್ಲ ಎಂಬಂತೆ ಬೇಟೆಯಾಡಿ ತನ್ನ ನಿಪುಣತೆಯನ್ನು ಪ್ರದರ್ಶಿಸಿದೆ.

ಪುಟ್ಟ ಹಕ್ಕಿಯೊಂದು ನೆಲದಲ್ಲಿ ಬಿದ್ದಿದ್ದ ಹಕ್ಕಿಪುಕ್ಕದ ಜೊತೆ ಆಟವಾಡುತ್ತಿತ್ತು. ಇದನ್ನು ಗಮನಿಸಿದ ಬೆಕ್ಕು ಹಕ್ಕಿಯನ್ನು ಬೇಟೆಯಾಡಿ ತಿನ್ನಲು ತಯಾರಿ ನಡೆಸಿದೆ. ಹಕ್ಕಿಯ ಮೇಲೆ ನೇರವಾಗಿ ಎರಗದೆ, ಹುಲಿ-ಚಿರತೆಗಳು ಹೊಂಚುಹಾಕಿ ಬೇಟೆಯಾಡೋ ರೀತಿ ತಾನು ಕೂಡ ಹಕ್ಕಿಗಾಗಿ ಹೊಂಚುಹಾಕುತ್ತಾ ಸ್ವಲ್ಪ ಹೊತ್ತು ಕಾದಿದೆ.

ಹಕ್ಕಿಯ ಗಮನ ತನ್ನ ಕಡೆ ಇಲ್ಲ ಎಂಬುದು ಕನ್ಫರ್ಮ್ ಆಗುತ್ತಿದ್ದಂತೆ ಮೆಲ್ಲಮೆಲ್ಲನೆ ತೆವಳುತ್ತಾ ಹಕ್ಕಿಯ ಕಡೆ ತೆರಳಿದ ಬೆಕ್ಕು, ಒಮ್ಮೆಲೆ ಹಕ್ಕಿಯ ಮೇಲೆ ಹಾರಿ ತನ್ನ ಬಾಯಿಯಿಂದ ಹಕ್ಕಿಯನ್ನು ಹಿಡಿದುಕೊಂಡು ಓಡಿ ಹೋಗಿದೆ‌. ಈ ವೀಡಿಯೋವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಮೂಲಕ ಸೆರೆಹಿಡಿದಿದ್ದಾರೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,

Watch Video

error: Content is protected !!