‘ಉಡ’ವೊಂದು ತನ್ನನ್ನು ಬೇಟೆಯಾಡಲು ಬಂದ ಚಿರತೆಯೊಂದಿಗೆ ಕಾಳಗಕ್ಕಿಳಿದ ವೀಡಿಯೋ ಸಖತ್ ವೈರಲ್ ಆಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಶೇರ್ ಮಾಡಿರುವ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.
ರಸ್ತೆ ದಾಟಲು ಯತ್ನಿಸುತ್ತಿದ್ದ ‘ಉಡ’ವನ್ನು ಕಂಡ ಚಿರತೆ ಮರಿಗಳು ಅದನ್ನು ಬೇಟೆಯಾಡಿ ತಿನ್ನಲು ಮನಸ್ಸು ಮಾಡಿದೆ. ಒಂದು ಚಿರತೆ ಮರಿ ಹಿಂಬಾಗದಿಂದ ಉಡದ ಮೇಲೆ ದಾಳಿ ಮಾಡಲು ಯತ್ನಿಸುತ್ತಿದ್ದಂತೆ ಅಪಾಯದ ಮುನ್ಸೂಚನೆ ಅರಿತ ಉಡ ತನ್ನ ಬೀಲವನ್ನು ಎತ್ತಿ ಚಿರತೆಯ ಕೆನ್ನೆಗೆ ಬಾರಿಸಿದೆ.
Some other time Mr Leopard😳 pic.twitter.com/hkjaRb5ArP
— Susanta Nanda IFS (@susantananda3) June 24, 2020
ಚಿರತೆ ಸ್ವಲ್ಪ ಸುದಾರಿಸಿಕೊಂಡು ಮತ್ತೆ ಉಡದ ಮೇಲೆ ದಾಳಿ ಮಾಡಲು ಯತ್ನಿಸಿದ್ದು, ಉಡ ಮತ್ತೆಮತ್ತೆ ಚಿರತೆ ಮರಿಯ ಮೇಲೆ ತನ್ನ ಬೀಲದಿಂದ ಪ್ರಹಾರ ಮಾಡಿದೆ. ಕೊನೆಗೆ ಚಿರತೆ ಮರಿ ನೇರವಾಗಿ ‘ಉಡ’ದ ಮೇಲೆ ದಾಳಿ ಮಾಡಿ, ‘ಉಡ’ವನ್ನು ಬಾಯಲ್ಲಿ ಕಚ್ಚಿಕೊಂಡು ಕಾಡಿನೊಳಕ್ಕೆ ಓಡಿಹೋಗಿದೆ.
ಈ ವೀಡಿಯೋವನ್ನು ಅಲ್ಲೇ ಇದ್ದ ವೈಲ್ಡ್ ಲೈಫ್ ಪೋಟೋಗ್ರಾಫರ್ಗಳು ಸೆರೆಹಿಡಿದಿದ್ದು, ಜೀವ ರಕ್ಷಣೆಗಾಗಿ ‘ಉಡ’ದ ಹೋರಾಟ, ಹಸಿವು ನೀಗಿಸಿಕೊಳ್ಳಲು ಚಿರತೆ ಮರಿಯ ಹೋರಾಟವು ಒಂದೇ ವೀಡಿಯೋದಲ್ಲಿ ಸೆರೆಯಾಗಿದೆ. ವೈರಲ್ ವೀಡಿಯೋ ನೋಡಿ,