fbpx

ಮೊದಲ ಮಹಡಿಗೆ ಲಗ್ಗೆಇಟ್ಟು ನಾಯಿಯನ್ನು ಬೇಟೆಯಾಡಿ ಹೊತ್ತೊಯ್ದ ಚಿರತೆ, ಶಾಕಿಂಗ್ ವೀಡಿಯೋ ವೈರಲ್

ಚಿರತೆಗಳು ಬೇಟೆಯಾಡುವುದರಲ್ಲಿ ಭಾರೀ ನಿಪುಣತೆಯನ್ನು ಹೊಂದಿರುತ್ತವೆ. ಒಮ್ಮೆ ತನ್ನ ಬೇಟೆಯ ಮೇಲೆ ಕಣ್ಣು ಇಟ್ಟರೆ ಅದನ್ನು ಕೊಂದು ಹೊಟ್ಟೆ ತುಂಬಿಸಿಕೊಳ್ಳೋತನಕ ಅವು ಸುಮ್ಮನೆ ಕೂರಲ್ಲ. ಅದನ್ನು ಬೇಟೆಯಾಡಲು ಅದೆಷ್ಟೇ ಅಡೆತಡೆಗಳು ಎದುರಾದರು ಎಲ್ಲವನ್ನು ಮೀರಿ ಅವು ತಮ್ಮ ಕೆಲಸವನ್ನು ಮುಗಿಸುತ್ತವೆ.

ಇದೇ ತರಹದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಡಿಯ ಮೇಲಿನ ಮನೆಯ ಬಾಗಿಲಿನ ಬಳಿ ಮಲಗಿದ್ದ ನಾಯಿಯನ್ನು ತನ್ನ ಚಾಣಾಕ್ಷತನ ಉಪಯೋಗಿಸಿ ಹಿಡಿದು ಚಿರತೆ ಹೊತ್ತೊಯ್ದಿದೆ.


ಸುದ್ದಿಗಳನ್ನು ತಕ್ಷಣ ಪಡೆಯಲು ನಮ್ಮ 'Telgram Channel' ಸೇರಿ

ಮಹಿಡಿಯ ಮೇಲೆ ಮೆಟ್ಟಿಲುಗಳ ಮೂಲಕ ಆಗಮಿಸಿದ ಚಿರತೆ, ಅಲ್ಲೇ ಬಾಗಿಲಿನ ಮುಂಬಾಗ ಮಲಗಿದ್ದ ನಾಯಿಯನ್ನು ನೋಡಿ ನಿಧಾನವಾಗಿ ಹೆಜ್ಜೆಗಳನ್ನಿಡುತ್ತಾ ಕುತ್ತಿಗೆಯನ್ನು ಬಲವಾಗಿ ಹಿಡಿದಿದೆ. ನಾಯಿ ನಿದ್ದೆಯಿಂದ ಎಚ್ಚರವಾಗುವ ಮೊದಲೇ ಚಿರತೆಯ ಹಿಡಿತಕ್ಕೆ ಸಿಕ್ಕಿಯಾಗಿದೆ.

ಚಿರತೆಯಿಂದ ತನ್ನ ಪ್ರಾಣ ಕಾಪಾಡಿಕೊಳ್ಳಲು ನಾಯಿ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ಚಿರತೆ ನಾಯಿಯನ್ನು ಬಾಯಿಯಲ್ಲಿ ಹಿಡಿದು ಕಾಡಿನೊಳಗೆ ಎಳೆದೊಯ್ದಿದೆ. ನಾಯಿಯ ಬೊಗಳುವ ಸದ್ದಿಗೆ ಮನೆಮಾಲೀಕ ಎದ್ದು ಹೊರ ಬಂದರೂ, ಅಷ್ಟರಲ್ಲಾಗಲೆ ಚಿರತೆ ನಾಯಿಯನ್ನು ಹೊತ್ತೊಯ್ದಿತ್ತು.

ಇದೀಗ ಚಿರತೆ ನಾಯಿಯನ್ನು ಬೇಟೆಯಾಡುತ್ತಿರುವ ಸಿಸಿಟಿವಿ ದೃಷ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಲ್ಲಿದೆ ನೋಡಿ ವೈರಲ್ ವೀಡಿಯೋ,

Watch Video

error: Content is protected !!