ತಾಯಿ-ಮಕ್ಕಳ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಮಕ್ಕಳು ಸಂಕಷ್ಟಕ್ಕೆ ಸಿಲುಕಿದಾಗ ತಾಯಿ ತನ್ನ ಸರ್ವಸ್ವವನ್ನೂ ಪಣಕ್ಕಿಟ್ಟು ಕಾಪಾಡುತ್ತಾಳೆ. ಇಲ್ಲಿ ಕೋಳಿಯೊಂದು ನಾಗರ ಹಾವಿನಿಂದ ತನ್ನ ಮರಿಗಳನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಕಾದಾಡಿದೆ.
ಕೋಳಿಯು ತನ್ನ ಪುಟ್ಟ ಮರಿಗಳೊಂದಿಗೆ ಸಾಗುತ್ತಿರುವಾಗ ಆಹಾರ ಅರಸಿ ಅದೇ ಜಾಗದಲ್ಲಿ ಹೋಗುತ್ತಿದ್ದ ಹಾವೊಂದು ಅಡ್ಡಸಿಕ್ಕಿದೆ. ಹಾವು ಇನ್ನೇನು ಕೋಳಿ ಮರಿಗಳ ಮೇಲೆ ದಾಳಿ ಮಾಡಿ ಕೊಂದು ತಿನ್ನಲು ಹೊಂಚು ಹಾಕುತ್ತಿರುವಾಗ, ತಾಯಿಕೋಳಿ ತನ್ನ ಮರಿಗಳನ್ನು ಕಾಪಾಡಲು ಹಾವಿನ ಮೇಲೆ ದಾಳಿ ಮಾಡಿದೆ.
ಕೊನೆಗೆ ಹೇಗೂ ತಾಯಿ ಕೋಳಿ ಹಾವಿನ ವಕ್ರದೃಷ್ಟಿಯಿಂದ ತನ್ನ ಮರಿಗಳನ್ನು ಕಾಪಾಡಿ ಹೊರತಂದಿದೆ. ಆದರೆ ಒಂದು ಮರಿಯನ್ನು ಮಾತ್ರ ಹಾವು ಸುತ್ತುವರಿದು ತಿನ್ನಲು ತಯಾರಿ ನಡೆಸಿತ್ತು. ತನ್ನ ಒಂದು ಮರಿ ಹಾವಿನ ಬಳಿ ಇರೋದನ್ನ ಗಮನಿಸಿದ ಕೋಳಿ ಮರಳಿಬಂದು ಹಾವಿನ ಮೇಲೆ ದಾಳಿ ಮಾಡಿ ಆ ಒಂದು ಮರಿಯನ್ನೂ ರಕ್ಷಿಸಿದೆ.
ಕೋಳಿಯು ಹಾವಿನ ಜೊತೆ ಕಾದಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತನ್ನ ಮರಿಗಳನ್ನು ಕಾಪಾಡಲು ವಿಷಜಂತುವಿನ ಜೊತೆ ಹೋರಾಡಿದ ತಾಯಿ ಕೋಳಿ ಪಟ್ಟ ಶ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೈರಲ್ ವೀಡಿಯೋ ಇಲ್ಲಿದೆ ನೋಡಿ,