fbpx

ಬಾಟಲ್ ಒಳಗೆ ಹೊಕ್ಕು ಹೊರಬರಲಾಗದೆ ತಡಕಾಡಿದ ಬೆಕ್ಕಿನ ಮರಿ, ತಾಯಿಬೆಕ್ಕು ಮಾಡಿದ್ದೇನು ನೋಡಿ (ವೈರಲ್ ವೀಡಿಯೋ)

ಬೆಕ್ಕಿನ ಮರಿಯೊಂದು ತುಂಟಾಟವಾಡಲು ಹೋಗಿ ಸಂಕಷ್ಟಕ್ಕೆ ಒಳಗಾದ ಘಟನೆ ನಡೆದಿದೆ. ಬಾಟಲಿಯೊಳಕ್ಕೆ ನುಗ್ಗಿದ ಮರಿಬೆಕ್ಕು ಹೊರಬರಲಾಗದೆ ಕಷ್ಟಪಟ್ಟಿದೆ.

ಒಂದೆರಡು ಸಲ ಬಾಟಲಿಯಿಂದ ಸ್ವಲ್ಪ ಮೇಲೆ ಬಂದ ಬೆಕ್ಕಿನ ಮರಿ, ಮತ್ತೆ ಭಯದಿಂದ ಒಳಹೊಕ್ಕಿ ಕೂತಿದೆ. ಇದನ್ನೇ ದೂರದಿಂದ ಗಮನಿಸುತ್ತಿದ್ದ ತಾಯಿ ಬೆಕ್ಕು ತನ್ನ ಮರಿ ಕಷ್ಟದಲ್ಲಿದೆ ಎಂದು ಗೊತ್ತಾಗಿದ್ದೇ ಸಹಾಯಕ್ಕೆ ಧಾವಿಸಿದೆ. ಆದರೆ ತಾಯಿ ಬೆಕ್ಕಿಗೂ ಮರಿಯನ್ನು ಬಾಟಲಿಯಿಂದ ಹೇಗೆ ಹೊರತೆಗೆಯುವುದು ಎಂದು ತಿಳಿಯುವುದಿಲ್ಲ.


Continue Reading

ಕೊನೆಗೆ ಹೇಗೂ ಧೈರ್ಯ ಮಾಡಿಕೊಂಡು ಬೆಕ್ಕಿನ ಮರಿ ಬಾಟಲಿಯಿಂದ ಹೊರಕ್ಕೆ ನೆಗೆದಿದೆ. ಈ ವೀಡಿಯೋವನ್ನು ‘ಹಫ್ ಪೋಸ್ಟ್ ಪೇಜ್’ ತನ್ನ ಫೇಸ್ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದು ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:  ಕುಡುಕ ಕಾರು ಚಾಲಕನ ಆವಾಂತರಕ್ಕೆ ಅಮಾಯಕ ಬಲಿ, ಭೀಕರ ಅಪಘಾತದ ವಿಡಿಯೋ ವೈರಲ್

ಕೆಲ ಪ್ರಾಣಿಪ್ರೇಮಿಗಳು ಬೆಕ್ಕಿನ ಮಾಲೀಕನ ವಿರುದ್ಧ ಕಿಡಿಕಾರಿದ್ದಾರೆ. ಬೆಕ್ಕಿನ ಮರಿಗೆ ಸಹಾಯ ಮಾಡುವ ಬದಲು ವೀಡಿಯೋ ಮಾಡಿದ್ದೇ ಇದಕ್ಕೆ ಕಾರಣ. ಇಲ್ಲಿದೆ ನೋಡಿ ವೈರಲ್ ವೀಡಿಯೋ,

Watch Video

Trending Short Videos

close

This will close in 26 seconds

error: Content is protected !!