fbpx

ಕುರಿ ಮೇಲೆ ಕೂತು ಸವಾರಿ ಮಾಡಿ ಕಾಟ ಕೊಟ್ಟೋನಿಗೆ, ಸರಿಯಾಗೆ ಗುಮ್ಮಿ ಸೇಡು ತೀರಿಸಿಕೊಂಡ ಕುರಿ, ವೀಡಿಯೋ ಸಖತ್ ವೈರಲ್

ಭೂಮಿಯ ಮೇಲೆ ವಾಸಿಸುವ ಎಲ್ಲಾ ಜೀವಿಗಳಿಗೂ ಈ ನೆಲದ ಮೇಲೆ ಸಮಾನವಾದ ಹಕ್ಕು ಇದೆ. ಆದರೆ ಮನುಷ್ಯ ಮಾತ್ರ ನಾನೇ ಶ್ರೇಷ್ಟ, ನನ್ನಿಂದಲೇ ಎಲ್ಲಾ ಎಂಬ ಭಾವನೆಯಲ್ಲಿ ಬದುಕುತ್ತಿದ್ದಾನೆ. ಇತರ ಪ್ರಾಣಿಗಳ ಜೊತೆ ಸಾಮರಸ್ಯದಿಂದ ಬದುಕುವ ಕಲೆ ಕಲಿಯುಗದ ಮನುಜನಿಗೆ ಮರೆತುಹೋಗಿದೆ.

ಇಲ್ಲೊಬ್ಬ ವ್ಯಕ್ತಿ ಕುರಿಯ ಮೇಲೆ ಕೂತು ಸವಾರಿ ಮಾಡುತ್ತಾ ಗೇಲಿ ಮಾಡಲು ಹೋಗಿದ್ದು, ಕ್ಷಣಮಾತ್ರದಲ್ಲೇ ತನ್ನ ತಪ್ಪಿಗೆ ಸರಿಯಾದ ಶಿಕ್ಷೆ ಅನುಭವಿಸಿದ್ದಾನೆ. ತನ್ನ ಗೆಳೆಯರೊಂದಿಗೆ ಕುರಿಯ ಹಿಂಡಿನ ಬಳಿ ಹೋದ ವ್ಯಕ್ತಿ ಗೆಳೆಯನ ಕೈಯಲ್ಲಿ ಮೊಬೈಲ್ ಕೊಟ್ಟು ಕುರಿಯೊಂದರ ಮೇಲೆ ಕೂತು ಸವಾರಿ ಮಾಡಿದ್ದಾನೆ.


Continue Reading

ಸ್ವಲ್ಪ ದೂರ ಕುರಿಯ ಮೇಲೆ ಸವಾರಿ ಮಾಡಿದ ಭೂಪ, ಅದರಿಂದ ಇಳಿದು ಇನ್ನೇನು ಹಿಂದೆ ತಿರುಗಿ ಸಾಗಿಬರುವಾಗ ಹಿಂದಿನಿಂದ ಬಂದ ಕುರಿ ಸರಿಯಾಗಿ ಗುಮ್ಮಿದೆ‌. ಕುರಿ ಗುಮ್ಮಿದ ರಭಸಕ್ಕೆ ವ್ಯಕ್ತಿ ಮಾರುದೂರ ಹೋಗಿ ಮುಗ್ಗರಿಸಿ ಬಿದ್ದಿದ್ದಾನೆ.

ಇದನ್ನೂ ಓದಿ:  ರಸ್ತೆಯಲ್ಲಿ ಆಟವಾಡುತ್ತಿದ್ದ ಪುಟ್ಟ ಮಗುವಿನ ಮೇಲೆ ಕಾರು ಹತ್ತಿಸಿ ಪರಾರಿಯಾದ ಚಾಲಕ! ಶಾಕಿಂಗ್ ವಿಡಿಯೋ ನೋಡಿ

ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಈ ವೀಡಿಯೋ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಇಲ್ಲಿದೆ ನೋಡಿ ವೈರಲ್ ವೀಡಿಯೋ,

Watch Video

Trending Short Videos


close

This will close in 26 seconds

error: Content is protected !!