ಕಳ್ಳರು, ದರೋಡೆಕೋರರು ಹೆಚ್ಚಾಗಿ ಮಹಿಳೆಯರ ಮೇಲೆಯೇ ದಾಳಿ ಮಾಡಿ ಕಳ್ಳತನ ಮಾಡೋದು ಸಾಮಾನ್ಯ. ಸರಗಳ್ಳರು ಮುಖ್ಯವಾಗಿ ಮಹಿಳೆಯರನ್ನೆ ಟಾರ್ಗೆಟ್ ಮಾಡಿ ಸಿಕ್ಕಿದ್ದನ್ನ ದೋಚಿಕೊಂಡು ಹೋಗುತ್ತಾರೆ.
ಮಹಿಳೆಯರು ಗಂಡಸರಿಗಿಂತ ದುರ್ಬಲರು, ತಮ್ಮ ಮೇಲೆ ಪ್ರತಿರೋಧ ತೋರಲ್ಲ ಎಂಬ ಮನೋಭಾವವೆ ಇದಕ್ಕೆ ಕಾರಣ. ಆದರೆ ಇಲ್ಲೊಬ್ಬ ಯುವತಿ ಇಂತಹ ಮನೋಭಾವ ಹೊಂದಿದ್ದ ಕಳ್ಳನಿಗೆ ಮತ್ತೆ ಮಹಿಳೆಯರತ್ತ ತಲೆಹಾಕದ ರೀತಿ ಪಾಠಕಲಿಸಿದ್ದಾಳೆ.
ಯುವತಿಯೊಬ್ಬಳ ಮೊಬೈಲ್ ಕದಿಯಲು ಹೋದ ಕಳ್ಳನಿಗೆ ಆಕೆ ‘ಕರಾಟೆ ಬ್ಲಾಕ್ಬೆಲ್ಟ್’ ಎಂಬುದು ತಿಳಿದಿರಲ್ಲ. ಮೊಬೈಲ್ ಕದ್ದು ತನ್ನ ಸೈಕಲ್ನಲ್ಲಿ ಪರಾರಿಯಾಗಲು ಯತ್ನಿಸಿದ ಕಳ್ಳನಿಗೆ ಯುವತಿ ತನ್ನ ಕರಾಟೆ ಕಲೆ ತೋರಿಸಿದ್ದಾಳೆ.
ಇನ್ನೇನು ಸೈಕಲ್ನಲ್ಲಿ ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಯುವತಿ ಕಳ್ಳನ ಮೇಲೆ ಜಿಗಿದು ಆತನ ಸೈಕಲ್ನನ್ನು ಬೀಳಿಸಿ ಆತನ ಮುಖಕ್ಕೆ ಪಂಚ್ ಕೊಟ್ಟಿದ್ದಾಳೆ. ಆತನ ಕೈಯಿಂದ ತನ್ನ ಮೊಬೈಲ್ ಕಿತ್ತುಕೊಂಡು ಆತನನ್ನು ಕುತ್ತಿಗೆಯಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ.
ಯುವತಿಯಲ್ವ, ಸುಲಭವಾಗಿ ಕದಿಯಬಹುದು ಎಂದುಕೊಂಡಿದ್ದ ಕಳ್ಳನಿಗೆ ತಾನು ಕದಿಯೋಕೆ ಹೊರಟಿರೋದು ಕರಾಟೆಪಟುವಿನೊಂದಿಗೆ ಎಂಬುದೇ ಗೊತ್ತಿರಲಿಲ್ಲ. ಇದಕ್ಕೆ ನೋಡಿ ಹೆಣ್ಣುಮಕ್ಕಳಿಗೆ ಸಣ್ಣಪ್ರಾಯದಿಂದಲೇ ಕರಾಟೆ ತರಬೇತಿ ಕೊಟ್ರೆ ಇಂತಹ ಸಂಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರುತ್ತೆ. ವೈರಲ್ ವೀಡಿಯೋ ನೋಡಿ,